ಮೈಸೂರು: ನಾಡಪ್ರಭು ಕೆಂಪೇಗೌಡರ ಭಾವಚಿತ್ರದ ಬದಲಾಗಿ ಮದಕರಿ ನಾಯಕನ ಭಾವಚಿತ್ರ ಮುದ್ರಿಸಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಿದ ತಾಲೂಕು ಆಡಳಿತದ ವಿರುದ್ಧ ಕೆಂಪೇಗೌಡ ಅಭಿಮಾನಿ ಬಳಗ ಪ್ರತಿಭಟಿಸಿರುವ ಘಟನೆ ಹೆಚ್. ಡಿ ಕೋಟೆಯಲ್ಲಿ ನಡೆದಿದೆ.
ಕೆಂಪೇಗೌಡ ಜಯಂತಿಯಂದು ಮದಕರಿ ನಾಯಕನ ಫ್ಲೆಕ್ಸ್ ಹಾಕಿ ಎಡವಟ್ಟು: ತಾಲೂಕು ಆಡಳಿತದ ವಿರುದ್ಧ ಆಕ್ರೋಶ - Madakari nayaks Flex on Kempegowda Jayanti at HD kote
ಹೆಚ್.ಡಿ ಕೋಟೆಯಲ್ಲಿ ಆಯೋಜಿಸಿದ್ದ ಕೆಂಪೇಗೌಡರ ಜಯಂತಿಯಲ್ಲಿ ಮದಕರಿ ನಾಯಕರ ಭಾವಚಿತ್ರ ಇರುವ ಫ್ಲೆಕ್ಸ್ ಅಳವಡಿಸಿದ್ದ ತಾಲೂಕು ಆಡಳಿತದ ವಿರುದ್ಧ ಕೆಂಪೇಗೌಡ ಅಭಿಮಾನಿ ಬಳಗ ಪ್ರತಿಭಟನೆ ನಡೆಸಿದೆ.

ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಹೆಚ್.ಡಿ ಕೋಟೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಕೆಂಪೇಗೌಡರ ಭಾವಚಿತ್ರದ ಬದಲಾಗಿ ಮದಕರಿ ನಾಯಕರ ಚಿತ್ರ ಮುದ್ರಣ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡ ಕೆಂಪೇಗೌಡರ ಅಭಿಮಾನಿಗಳು ಕೆಲಕಾಲ ತಾಲೂಕು ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸಿದ್ದಾರೆ. ಜೊತೆಗೆ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದ್ದಾರೆ. ಬಳಿಕ ವೇದಿಕೆಯಿಂದ ಬ್ಯಾನರ್ ಅನ್ನು ತೆರವುಗೊಳಿಸಿ, ಫ್ಲೆಕ್ಸ್ ಇಲ್ಲದೇ ಕೆಂಪೇಗೌಡರ ಜಯಂತಿ ಆಚರಿಸಲಾಯಿತು.
ಓದಿ :ಬೀದರ್ನಲ್ಲಿ ವರುಣಾರ್ಭಟ.. ದಾಖಲೆ ಮಳೆಗೆ ದಾಬಕಾ ಗ್ರಾಮದ ಜನ ಹೈರಾಣ