ಮೈಸೂರು:ಪರಿವಾರ ಮತ್ತು ತಳವಾರ ಮಸೂದೆಗೆ ಎರಡೂ ಸದನಗಳಲ್ಲೂ ಒಪ್ಪಿಗೆ ಪಡೆದು, ತಿದ್ದುಪಡಿ ಮಾಡಿ ಮಸೂದೆ ಅಂಗೀಕಾರಕ್ಕೆ ಕಾರಣರಾದ ಕೇಂದ್ರದ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದ ಸಲ್ಲಿಸಿದ್ದಾರೆ.
ಪರಿವಾರ, ತಳವಾರ ಮಸೂದೆ ತಿದ್ದುಪಡಿ: ಕೇಂದ್ರ ಸಚಿವ ಜೋಶಿಗೆ ಧನ್ಯವಾದ ಹೇಳಿದ ಸಂಸದ ಪ್ರತಾಪ್ ಸಿಂಹ - ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲು ಕಾರಣಾರಾದ ಸಚಿವ ಪ್ರಹ್ಲಾದ್ ಜೋಶಿ
ಪರಿವಾರ ಮತ್ತು ತಳವಾರ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಸೂದೆ 2020 ಎಂದು ಸರಿಪಡಿಸಿ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲು ಕಾರಣರಾದ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪ್ರತಾಪ್ ಸಿಂಹ ಧನ್ಯವಾದ ಅರ್ಪಿಸಿದ್ದಾರೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಪರಿವಾರ, ತಳವಾರ ಸಮುದಾಯದ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (ಎರಡನೇ ತಿದ್ದುಪಡಿ) ಮಸೂದೆಗೆ ಲೋಕಸಭೆಯ ಅಂಗೀಕಾರ ದೊರೆತಿದ್ದರೂ, ರಾಜ್ಯ ಸಭೆಯಲ್ಲಿ ಮಸೂದೆ ಮಂಡನೆಯಾದಾಗ ಪರಿಶಿಷ್ಟ ಜನಾಂಗ ತಿದ್ದುಪಡಿ ಮಸೂದೆ-2019 ಎಂದಾಗಿತ್ತು.
ಈ ಮಸೂದೆಯನ್ನು ಪರಿವಾರ ಮತ್ತು ತಳವಾರ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಸೂದೆ 2020 ಎಂದು ಸರಿಪಡಿಸಿ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲು ಕಾರಣಾರಾದ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡು ಕೇಂದ್ರ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
TAGGED:
ಪರಿವಾರ ಮತ್ತು ತಳವಾರ ಮಸೂದೆ