ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರದಿಂದ ಚುನಾವಣೆಗೆ 500 ಕೋಟಿ ಹಫ್ತಾ ವಸೂಲಿ: ಎಂ.ಲಕ್ಷ್ಮಣ್ ಆರೋಪ

ಉಪ ಚುನಾವಣೆಗಾಗಿ ಬಿಜೆಪಿ ಸರ್ಕಾರ 500 ಕೋಟಿ ಹಫ್ತಾ ವಸೂಲಿಗೆ ಇಳಿದಿದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

dsd
ಸರ್ಕಾರದ ವಿರುದ್ಧ ಎಮ್.ಲಕ್ಷ್ಮಣ್ ಆರೋಪ

By

Published : Apr 9, 2021, 10:12 PM IST

ಮೈಸೂರು: ಉಪ ಚುನಾವಣೆಗಾಗಿ ಸರ್ಕಾರ ವಲಸಿಗರ 8 ವಿವಿಧ ಇಲಾಖೆಗಳಿಂದ 500 ಕೋಟಿ ಹಫ್ತಾ ವಸೂಲಿಗೆ ಸೂಚನೆ ನೀಡಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಸರ್ಕಾರದ ವಿರುದ್ಧ ಎಮ್.ಲಕ್ಷ್ಮಣ್ ಆರೋಪ

3 ಉಪ ಚುನಾವಣೆಗಳಿಗೆ ಹಣ ಹಂಚಲು ಹಫ್ತಾ ವಸೂಲಿ ಮಾಡಲಾಗುತ್ತಿದ್ದು, ಅದರಲ್ಲಿ ರಾಜ್ಯದ 40 ಅಬಕಾರಿ ಡಿಸಿ ಹಾಗೂ ಬೆಂಗಳೂರಿನ 7 ಅಬಕಾರಿ ಡಿಸಿಗಳಿಂದ ಒಬ್ಬರಿಗೆ 1 ಕೋಟಿ ರೂ.ಹಣ ವಸೂಲಿ ಮಾಡಲಾಗುತ್ತಿದೆ. ಇತರ 8 ವಲಸಿಗ ಇಲಾಖೆಗಳಿಂದ ಮಂತ್ರಿಗಳ ಮೂಲಕ 5,000 ಕೋಟಿ ರೂ. ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ಪೊಲೀಸ್ ಎಸ್.ಕಾರ್ಟ್ ಮೂಲಕ ಹಣ ಕಳುಹಿಸಿ ಹಂಚಿಕೆ ಮಾಡಲು ಬಿಜೆಪಿ ಸಂಚು ಮಾಡಿದೆ. ಕೂಡಲೇ 3 ಉಪ ಚುನಾವಣೆ ನಡೆಯುವ ಕ್ಷೇತ್ರಗಳ ಅಧಿಕಾರಿಗಳನ್ನು ಬದಲಿಸಿ ಬೇರೆ ಕ್ಷೇತ್ರದ ಅಧಿಕಾರಿಗಳ ಮೂಲಕ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.

ABOUT THE AUTHOR

...view details