ಕರ್ನಾಟಕ

karnataka

ETV Bharat / state

ಸಿಬಿಐ ​ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ - ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸಿಬಿಐ ಎನ್ನೋದು ಸೆಂಟ್ರಲ್ ಬ್ಯೂರೋ ಆಫ್​​​ ಇನ್ವೆಸ್ಟಿಗೇಷನ್ ಅಲ್ಲ, ಚೋರ್ ಬಜಾರ್ ಇನ್ಸ್​​​ಟಿಟ್ಯೂಟ್​​ ಆಗಿ ಕೆಲಸ ಮಾಡುತ್ತಿದೆ. ಈ ಕಾರಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿದರು.

m lakshman reaction on cbi raid
''ಸಿಬಿಐ'' ಚೋರ್ ಬಜಾರ್ ಇನ್ಸ್​​​ಟಿಟ್ಯೂಟ್​​: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ

By

Published : Oct 6, 2020, 2:18 PM IST

ಮೈಸೂರು: ಸಿಬಿಐ ಚೋರ್ ಬಜಾರ್ ಇನ್ಸ್​​​ಟಿಟ್ಯೂಟ್​​ ಆಗಿ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಭಯದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿಸಿವೆ ಎಂದು ದೂರಿದರು.‌ ಇಂತಹ ತಂತ್ರಗಾರಿಕೆಗಳಿಗೆ ಕಾಂಗ್ರೆಸ್ ಮುಖಂಡರು ಬಗ್ಗುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಐ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ

ಸಿಬಿಐ ದಾಳಿ ಪೂರ್ಣಗೊಳಿಸಿದ 1 ಗಂಟೆಯೊಳಗೆ ಪ್ರೆಸ್ ನೋಟ್ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ತರಾತುರಿಯಲ್ಲಿ ಸಿಬಿಐ ಪ್ರೆಸ್ ಮೀಟ್ ಬಿಡುಗಡೆ ಮಾಡಿ, ‌ಜನರನ್ನು ಯಾಮಾರಿಸಲು ಹೋಗಿದೆ. ಬಿಜೆಪಿ ಮುಖಂಡರು ಸತ್ಯ ಹರಿಶ್ಚಂದ್ರರೇ? ಅವರ ಬಳಿ ದುಡ್ಡು ಇಲ್ಲವೇ? ಸಿಬಿಐ ಅವರು ನನ್ನನ್ನು ಕರೆದುಕೊಂಡು ಹೋದರೆ, ಬಿಜೆಪಿ ಮುಖಂಡರ ಬಳಿ ತೂಕದ ಲೆಕ್ಕದಷ್ಟು ಹಣ ಎಣಿಕೆ ಮಾಡುವುದನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದರು.

ಕೆಪಿಸಿಸಿ ವಕ್ತಾರೆ ಮಂಜುಳ ಮಾನಸ ಮಾತನಾಡಿ, ಉತ್ತರಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯಿಂದ ದೇಶವೇ ಬೆಚ್ಚಿ ಬಿದ್ದಿದೆ. ಯುಪಿ ಸಿಎಂ ತಮ್ಮ ರಾಜ್ಯವನ್ನು ಗೂಂಡಾ ರಾಜ್ಯವಾಗಿ ಪರಿವರ್ತನೆ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details