ಕರ್ನಾಟಕ

karnataka

ಕರ್ನಾಟಕದಲ್ಲಿ ಶ್ವಾಸಕೋಶ ಕ್ಯಾನ್ಸರ್​ನಿಂದ ಅಧಿಕ ಸಾವು: ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಗೊತ್ತಾ?

By

Published : Aug 2, 2023, 6:48 AM IST

ಕರ್ನಾಟಕದಲ್ಲಿ ಶ್ವಾಸಕೋಶದ ಕ್ಯಾನ್ಸರ್ ನಿಂದ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ. ಪುರುಷರಲ್ಲಿ ಸಂಭವಿಸುತ್ತಿರುವ ಕ್ಯಾನ್ಸರ್ ಸಾವುಗಳಲ್ಲಿ ಶೇ. 12.05ರಷ್ಟು ಮತ್ತು ಮಹಿಳೆಯರಲ್ಲಿ ಶೇ.8.9 ರಷ್ಟು ಮಂದಿ ಶ್ವಾಸಕೋಶದ ಕ್ಯಾನ್ಸರ್​​ನಿಂದ ಮೃತಪಡುತ್ತಿದ್ದಾರೆ.

ಶ್ವಾಸಕೋಶ ಕ್ಯಾನ್ಸ್​ರ್ ಬಗ್ಗೆ ವೈದ್ಯರ ಸಲಹೆ ​
ಶ್ವಾಸಕೋಶ ಕ್ಯಾನ್ಸ್​ರ್ ಬಗ್ಗೆ ವೈದ್ಯರ ಸಲಹೆ ​

ಮೈಸೂರು: ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ಜೊತೆಗೆ ಭಾರತದಲ್ಲಿ ಹೆಚ್ಚು ಜನ ಶ್ವಾಸಕೋಶ ಕ್ಯಾನ್ಸರ್ ನಿಂದ ಮೃತಪಡುತ್ತಿದ್ದಾರೆ. ಇದು ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 5.9ರಷ್ಟು ಮತ್ತು ಎಲ್ಲ ಕ್ಯಾನ್ಸರ್ - ಸಂಬಂಧಿತ ಸಾವುಗಳಲ್ಲಿ ಶೇ. 8.1 ರಷ್ಟು ಅಧಿಕವಾಗಿದೆ ಎಂದು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆಯ (ಎಚ್​ಸಿಜಿ-ಬಿಎಚ್ಐಒ) ಹಿರಿಯ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಕೆ.ಜಿ.ಶ್ರೀನಿವಾಸ್ ಹೇಳಿದರು.

ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನದ ಅಂಗವಾಗಿ ಮಂಗಳವಾರ ಇಲ್ಲಿನ ಪ್ರೆಸ್​​ಕ್ಲಬ್​ನಲ್ಲಿ ಮಾತನಾಡಿದ ಅವರು, “2021 ರಲ್ಲಿ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್​ನ ಅಂದಾಜು ಪ್ರಮಾಣವು ಪುರುಷರಲ್ಲಿ 109,000 ಪ್ರಕರಣಗಳು ಮತ್ತು ಮಹಿಳೆಯರಲ್ಲಿ 45,000 ಪ್ರಕರಣಗಳು ದಾಖಲಾಗುತ್ತಿವೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣವು ಲಕ್ಷ ಜನರಲ್ಲಿ ಶೇ.6.9 ಮಂದಿಗೆ ಬರುತ್ತಿದೆ. ಆದರೆ, ಈ ಪ್ರಮಾಣ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯತ್ಯಾಸ ಕಂಡು ಬರುತ್ತಿದೆ. ಅತಿ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಇರುವ ರಾಜ್ಯಗಳು ಎಂದರೆ ಮಿಜೋರಾಂ (100,000ಕ್ಕೆ 28.3), ಕೇರಳ (100,000ಕ್ಕೆ 27.2) ಮತ್ತು ಮಣಿಪುರ (100,000ಕ್ಕೆ 26.6) ಎಂದು ಮಾಹಿತಿ ನೀಡಿದರು.

ಶ್ವಾಸಕೋಶ ಕ್ಯಾನ್ಸ್​ರ್ ಸಾವಿನ ಪ್ರಮಾಣ: ಕರ್ನಾಟಕದಲ್ಲಿ ಶ್ವಾಸಕೋಶದ ಕ್ಯಾನ್ಸರ್ ನಿಂದ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ. ಪುರುಷರಲ್ಲಿ ಸಂಭವಿಸುತ್ತಿರುವ ಕ್ಯಾನ್ಸರ್ ಸಾವುಗಳಲ್ಲಿ ಶೇ. 12.05ರಷ್ಟು ಮತ್ತು ಮಹಿಳೆಯರಲ್ಲಿ ಶೇ.8.9 ರಷ್ಟು ಮಂದಿ ಶ್ವಾಸಕೋಶದ ಕ್ಯಾನ್ಸರ್ ನಿಂದ ಮೃತಪಡುತ್ತಿದ್ದಾರೆ. 2021 ರಲ್ಲಿ ಕರ್ನಾಟಕದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಂದಾಜು ಪ್ರಮಾಣವು ಪುರುಷರಲ್ಲಿ 3,614 ಪ್ರಕರಣಗಳು ಮತ್ತು ಮಹಿಳೆಯರಲ್ಲಿ 2,130 ಪ್ರಕರಣಗಳು ಎಂದು ಹೇಳಿದರು.

ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣವು ಹಲವಾರು ಕಾರಣಗಳಿಂದ ಹೆಚ್ಚುತ್ತಿದೆ. ಅವುಗಳಲ್ಲಿ ಮುಖ್ಯವಾದವು ತಂಬಾಕು ಸೇವನೆ, ಧೂಮಪಾನ ಮತ್ತು ಕಲುಷಿತ ಗಾಳಿ ಸೇವನೆ. ಧೂಮಪಾನದ ಹರಡುವಿಕೆ ವಿಶೇಷವಾಗಿ ಪುರುಷರಲ್ಲಿ ಅಧಿಕವಾಗಿದೆ.

ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅನ್ನು ಎದುರಿಸುವಲ್ಲಿ ಒಂದು ಸವಾಲು ಎಂದರೆ ಆರಂಭಿಕ ಪತ್ತೆ ಮತ್ತು ಅರಿವಿನ ಕೊರತೆ. ಅನೇಕ ರೋಗಿಗಳು ಕಾಯಿಲೆ ಕೊನೆ ಹಂತದಲ್ಲಿ ಇದ್ದಾಗ ಚಿಕಿತ್ಸೆಗೆ ಬರುತ್ತಾರೆ. ಇದರಿಂದ ರೋಗಿಯ ಬದುಕುಳಿಯುವಿಕೆ ಪ್ರಮಾಣ ಕಡಿಮೆ ಆಗುತ್ತದೆ. ಹೆಚ್ಚುವರಿಯಾಗಿ, ಆರೋಗ್ಯ ಸೌಲಭ್ಯಗಳು ಮತ್ತು ಕ್ಯಾನ್ಸರ್ ಸ್ಕ್ರೀನಿಂಗ್ ಕಾರ್ಯಕ್ರಮಗಳು ಸರಿಯಾಗಿ ತಲುಪುತ್ತಿಲ್ಲ.

ಕ್ಯಾನ್ಸರ್​​ ಚಿಕಿತ್ಸೆ: ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಸಂಬಂಧಿಸಿದ ಚಿಕಿತ್ಸಾ ವಿಧಾನಗಳು ಇತ್ತೀಚಿನ ವರ್ಷಗಳಲ್ಲಿ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಕೀಮೋಥೆರಪಿ, ಉದ್ದೇಶಿತ ಚಿಕಿತ್ಸೆಗಳು ಮತ್ತು ಇಮ್ಯುನೊಥೆರಪಿ ಸೇರಿದಂತೆ ಗಮನಾರ್ಹ ಪ್ರಗತಿಯನ್ನು ಕಂಡಿವೆ. ಭಾರತ್ ಇನ್ಸಿಟಿಟ್ಯೂಟ್ಆ ಫ್ ಆಂಕೊಲಾಜಿಯಲ್ಲಿ, ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಆರಂಭಿಕ ಮತ್ತು ಕೊನೆಯ ಹಂತದ ಶ್ವಾಸಕೋಶದ ಕ್ಯಾನ್ಸರ್​ಗಳಿಗೆ ಹಲವಾರು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತೇವೆ. ಇದರಲ್ಲಿ ಟಾರ್ಗೆಟೆಡ್ ಥೆರಪಿಗಳು ಮತ್ತು ಇಮ್ಯುನೊಥೆರಪಿಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಚಿಕಿತ್ಸಾ ವಿಧಾನಗಳು ತುಂಬಾ ದುಬಾರಿಯಾಗಿದೆ. ಆದರೆ, ನಮ್ಮ ಭಾರತ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಪ್ರಯೋಗಗಳಲ್ಲಿ ಉಚಿತ ವೆಚ್ಚದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ವೈದ್ಯರ ಸಲಹೆಗಳೇನು?:ಎಚ್ಸಿಜಿ-ಬಿಎಚ್ಐಒನ ಹಿರಿಯ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್ ಡಾ.ಎಂ. ವಿಜಯ್ ಕುಮಾರ್ ಮಾತನಾಡಿ, "ಶ್ವಾಸಕೋಶದ ಕ್ಯಾನ್ಸರ್ ನಿರ್ವಹಣೆಯಲ್ಲಿ ಶಸ್ತ್ರಚಿಕಿತ್ಸೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿಶೇಷವಾಗಿ ಆರಂಭಿಕ ಹಂತದ ಸಣ್ಣ- ಅಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್(NSCLC). ಸಂಪೂರ್ಣ ಛೇದನವನ್ನು ಸಾಧಿಸಲು ಗೆಡ್ಡೆ ಮತ್ತು ಯಾವುದೇ ಪೀಡಿತ ಹತ್ತಿರದ ಅಂಗಾಂಶಗಳನ್ನು ತೆಗೆದುಹಾಕುವುದು ಶಸ್ತ್ರಚಿಕಿತ್ಸೆಯ ಪ್ರಾಥಮಿಕ ಗುರಿಯಾಗಿರುತ್ತದೆ.

ಶಸ್ತ್ರಚಿಕಿತ್ಸೆಯ ಆಯ್ಕೆಗಳು ಗೆಡ್ಡೆಯ ಹಂತ ಮತ್ತು ಸ್ಥಳವನ್ನು ಅವಲಂಬಿಸಿರುತ್ತದೆ. ಆರಂಭಿಕ ಹಂತದ NSCLC ಗಾಗಿ, ಲೋಬೆಕ್ಟಮಿ (ಶ್ವಾಸಕೋಶದ ಲೋಬ್ ಅನ್ನು ತೆಗೆಯುವುದು) ಅಥವಾ ನ್ಯುಮೋನೆಕ್ಟಮಿ (ಸಂಪೂರ್ಣ ಶ್ವಾಸಕೋಶವನ್ನು ತೆಗೆಯುವುದು) ಮಾಡಬಹುದು. ಗೆಡ್ಡೆ ಚಿಕ್ಕದಾಗಿದ್ದರೆ ಮತ್ತು ಬಾಹ್ಯವಾಗಿ ನೆಲೆಗೊಂಡಿರುವ ಸಂದರ್ಭಗಳಲ್ಲಿ, ಸೆಗ್ಮೆಂಟೆಕ್ಟಮಿ ಅಥವಾ ವೆಡ್ಜ್ ರಿಸೆಕ್ಷನ್ ಅನ್ನು ಪರಿಗಣಿಸಬಹುದು ಎಂದು ಹೇಳಿದರು.

ಇದನ್ನೂ ಓದಿ:Lung cancer: ಬೆಂಗಳೂರಿನ ಮಹಿಳೆಯರಲ್ಲಿ ಹೆಚ್ಚುತ್ತಿದೆ ಶ್ವಾಸಕೋಶದ ಕ್ಯಾನ್ಸರ್​​.. ವೈದ್ಯರು ಏನಂತಾರೆ?

ABOUT THE AUTHOR

...view details