ಮೈಸೂರು :ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಹಿನ್ನೆಲೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯಿಂದ ಸಹಪಂಕ್ತಿ ಭೋಜನ ಆಯೋಜನೆ ಮಾಡಲಾಗಿತ್ತು. ರಾಮಕೃಷ್ಣ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಪಕ್ಕದಲ್ಲಿ ಪೌರಕಾರ್ಮಿಕರು, ಒಕ್ಕಲಿಗರು,ಮುಸ್ಲಿಮರು,ಲಿಂಗಾಯತ, ಹಿಂದುಳಿದ ವರ್ಗ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಸಹಪಂಕ್ತಿ ಭೋಜನಾದಲ್ಲಿ ಪಾಲ್ಗೊಂಡು ಜಾತಿಗಳ ನಡುವೆ ಸಾಮರಸ್ಯ ಮುಖ್ಯವೆಂದು ತೋರಿಸಿದರು.
ಕಾರ್ಯಕ್ರಮದ ಆಯೋಜಕ ಕೆ ಎಸ್ ಶಿವರಾಮ್ ಮಾತನಾಡಿ, ಜಾತಿಗಳ ನಡುವೆ ಸಾಮಾಜಿಕ ಅಂತರ ಕಡಿಮೆಯಾಗಿ, ಸಾಮರಸ್ಯದಿಂದ ಬಾಳಬೇಕು ಎಂಬ ಸಂದೇಶ ರವಾನೆಯಾಗಬೇಕು. ಕೊರೊನಾ ಓಡಿಸಲು ಸಾಮಾಜಿಕ ಅಂತರ ಕಾಪಾಡಿ, ಸಾಮರಸ್ಯದಿಂದ ದೂರವಾಗಬಾರದು ಎಂದರು.