ಮೈಸೂರು:ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಲ್ಲಿ ಪ್ರಿಯತಮೆ ಪಾಸ್ ಆಗಿದ್ದು, ಪ್ರಿಯಕರ ಫೇಲ್ ಆಗಿದ್ದಾನೆ.
ಕಳೆದ ಗುರುವಾರ ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಪ್ರೇಮಿಗಳು ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮೊನ್ನೆ ಪಿಯು ಫಲಿತಾಂಶ ಪ್ರಕಟಗೊಂಡಿದೆ. ಆದ್ರೆ ಈ ಫಲಿತಾಂಶದಲ್ಲಿ ಪ್ರಿಯತಮೆ ಪಾಸ್ ಆಗಿದ್ದು, ಪ್ರಿಯಕರ ರವಿ ಫೇಲ್ ಆಗಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ್ದ ಯುವ ಪ್ರೇಮಿಗಳಲ್ಲಿ ಪ್ರಿಯತಮೆ ಪಾಸ್, ಪ್ರಿಯಕರ ಫೇಲ್ ಹೌದು, ಯುವತಿ ಮತ್ತು ರವಿ ಸರ್ಕಾರಿ ಪದವಿಪೂರ್ವ ಕಾಲೇಜೊಂದರಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇವರಿಬ್ಬರು ಕಾಲೇಜಿನಲ್ಲಿ ಓದುತ್ತಿರುವಾಗಲೇ ಲವ್ಮಾಡುತ್ತಿದ್ದರು ಎನ್ನಲಾಗಿದೆ.
ಇವರಿಬ್ಬರ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕಾವ್ಯ 402 ಅಂಕ ಪಡೆದು ಪಾಸ್ ಆಗಿದ್ದಾಳೆ. ಆದ್ರೆ ರವಿ 215 ಅಂಕ ಪಡೆದು ಫೇಲ್ ಆಗಿದ್ದಾನೆ. ಇವರಿಬ್ಬರ ಮದುವೆಗೆ ಪೋಷಕರು ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರೇಮಿಗಳಿಗೆ ಕೆ.ಆರ್. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.