ಕರ್ನಾಟಕ

karnataka

ETV Bharat / state

ಮದುವೆಗೆ ಮನೆಯವರ ವಿರೋಧ: ನದಿಗೆ ಹಾರಿ ಪ್ರಾಣ ಬಿಟ್ಟ ಪ್ರೇಮಿಗಳು - ಆತ್ಮಹತ್ಯೆ

ಮದುವೆಗೆ ಮನೆಯವರ ವಿರೋಧ ಹಿನ್ನೆಲೆ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮಿಗಳಿಬ್ಬರ ಮದುವೆಗೆ ಕುಟುಂಬದವರು ಒಪ್ಪಿಗೆ ಸೂಚಿಸಲಿಲ್ಲವೆಂದು ಮನನೊಂದ ಪ್ರೇಮಿಗಳು ಸಾಗರಕಟ್ಟೆ ಬಳಿ‌ ಹರಿಯುವ ಲಕ್ಷ್ಮಣತೀರ್ಥ ನದಿಗೆ ಸೋಮವಾರ ಸಂಜೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲವಾಲ ಪೋಲಿಸ್ ಠಾಣೆ

By

Published : Sep 10, 2019, 3:36 PM IST

ಮೈಸೂರು:ಮದುವೆಗೆ ಮನೆಯವರ ವಿರೋಧ ಹಿನ್ನೆಲೆ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮಿಗಳಿಬ್ಬರ ಮದುವೆಗೆ ಕುಟುಂಬದವರು ಒಪ್ಪಿಗೆ ಸೂಚಿಸಲಿಲ್ಲವೆಂದು ಮನನೊಂದ ಪ್ರೇಮಿಗಳು ಸಾಗರಕಟ್ಟೆ ಬಳಿ‌ ಹರಿಯುವ ಲಕ್ಷ್ಮಣತೀರ್ಥ ನದಿಗೆ ಸೋಮವಾರ ಸಂಜೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ಪ್ರೇಮಿಗಳನ್ನುಕೆ.ಆರ್.ನಗರ ತಾಲೂಕಿನ ಗ್ರಾಮವೊಂದರ ರಂಜಿತಾ (19), ಹಾಗೂ ವಿಜಯನಗರ ನಿವಾಸಿ ಶಿವು (21) ಎಂದು ಗರುತಿಸಲಾಗಿದೆ. ಇವರಿಬ್ಬರೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು, ಬೇರೆ ಬೇರೆ ಜಾತಿಯವರಾಗಿದ್ದರಿಂದ ಇವರ ಮದುವೆಗೆ ಕುಟುಂಬದವರ ಸಹಮತ ಇರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಪ್ರೇಮಿಗಳು ಸಾಗರಕಟ್ಟೆ ಬಳಿ‌ ಹರಿಯುವ ಲಕ್ಷ್ಮಣತೀರ್ಥ ನದಿಗೆ ಸೋಮವಾರ ಸಂಜೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಇಲವಾಲ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಆಗ್ನಿಶಾಮಕ ದಳ ಹಾಗೂ ನುರಿತ ಈಜು ತಜ್ಞರಿಂದ ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ABOUT THE AUTHOR

...view details