ಮೈಸೂರು:ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪ್ರೇಯಸಿಯನ್ನು ಕೊಂದ ಪ್ರಿಯಕರ, ಬಳಿಕ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಿ. ನರಸೀಪುರ ತಾಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.
ತಿ. ನರಸೀಪುರ ತಾಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದ ಮಹಿಳೆ ಹಾಗೂ ಸಿದ್ದರಾಜು ಮೃತರು. ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ಸಿದ್ದರಾಜು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದರೆ, ಮಹಿಳೆಯ ಶವ ಹೂಳಿರುವುದು ಕಂಡುಬಂದಿದೆ. ಹಲವು ವರ್ಷಗಳಿಂದ ಮಹಿಳೆ ಹಾಗೂ ಸಿದ್ದರಾಜು ಅಕ್ರಮ ಸಂಬಂಧ ಹೊಂದಿದ್ದರು. ಶನಿವಾರ ಮಹಿಳೆ ಜೊತೆ ಸಿದ್ದರಾಜು ತಲಕಾಡಿನತ್ತ ತೆರಳಿದ್ದ. ಬಳಿಕ ಇಬ್ಬರು ಹೆಣವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.