ಮೈಸೂರು: ವಿವಾಹಕ್ಕೆ ಪೋಷಕರು ನಿರಾಕರಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಲಾಡ್ಜ್ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡಿಮೊಹಲ್ಲದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಬಿ.ಜಿ ಸತೀಶ್ (21) ವರಲಕ್ಷ್ಮಿ (21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ. ಕಳೆದ 4 ವರ್ಷಗಳಿಂದ ಇಬ್ಬರು ಪರಸ್ವರ ಪ್ರೀತಿಸುತ್ತಿದ್ದರು. ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ 4 ದಿನಗಳ ಹಿಂದೆ ಊರುಬಿಟ್ಟಿದ್ದ ಪ್ರೇಮಿಗಳು ಮೈಸೂರಿನ ಲಾಡ್ಜ್ನಲ್ಲಿ ತಂಗಲು ಬಂದಿದ್ದರು.
ಮೈಸೂರು: ವಿವಾಹಕ್ಕೆ ಪೋಷಕರ ನಿರಾಕರಣೆ..ಮನನೊಂದ ಪ್ರೇಮಿಗಳ ಆತ್ಮಹತ್ಯೆ - ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಪ್ರೇಮಿಗಳು ಆತ್ಮಹತ್ಯೆ
ಕಳೆದ 4 ವರ್ಷಗಳಿಂದ ಇಬ್ಬರು ಪರಸ್ವರ ಪ್ರೀತಿಸುತ್ತಿದ್ದರು. ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ 4 ದಿನಗಳ ಹಿಂದೆ ಊರು ಬಿಟ್ಟಿದ್ದ ಪ್ರೇಮಿಗಳು ಮೈಸೂರಿನ ಲಾಡ್ಜ್ನಲ್ಲಿ ತಂಗಲು ಬಂದಿದ್ದರು.
![ಮೈಸೂರು: ವಿವಾಹಕ್ಕೆ ಪೋಷಕರ ನಿರಾಕರಣೆ..ಮನನೊಂದ ಪ್ರೇಮಿಗಳ ಆತ್ಮಹತ್ಯೆ lovers-commit-suicide-after-family-refused-to-marriage](https://etvbharatimages.akamaized.net/etvbharat/prod-images/768-512-13785870-thumbnail-3x2-mys.jpg)
ಮನನೊಂದ ಪ್ರೇಮಿಗಳು ಆತ್ಮಹತ್ಯೆ
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮಂಗಳವಾರ ಸಂಜೆ ಲಾಡ್ಜ್ ಸೇರಿದವರು ರಾತ್ರಿಯೂ ಹೊರ ಬಂದಿರಲಿಲ್ಲ. ಇಂದು ಬೆಳಗ್ಗೆಯೂ ಹೊರಬಾರದ ಹಿನ್ನೆಲೆ ರೂಮ್ ಬಳಿ ತೆರಳಿ ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಸ್ಥಳೀಯರು ಜಮಾಯಿಸುವಷ್ಟರಲ್ಲಿ ಆರೋಪಿ ಪರಾರಿ
Last Updated : Dec 1, 2021, 5:23 PM IST