ಮೈಸೂರು:ಚಾಲಕನ ಅಜಾಗರೂಕತೆಯಿಂದ ಲಾರಿ ಟೋಲ್ ಬೂತ್ಗೆ ಡಿಕ್ಕಿ ಹೊಡೆದು ಬೂತ್ ಸಂಪೂರ್ಣ ಧ್ವಂಸವಾಗಿರುವ ಘಟನೆ ತಿ.ನರಸೀಪುರ ಬಳಿಯ ಯಡದೊರೆ ಟೋಲ್ ಬೂತ್ ನಲ್ಲಿ ನಡೆದಿದೆ.
ಲಾರಿ ಡಿಕ್ಕಿ: ಯಡದೊರೆ ಟೋಲ್ ಬೂತ್ ಧ್ವಂಸ - ಟೋಲ್ ಬೂತ್ಗೆ ಲಾರಿ ಡಿಕ್ಕಿ ಸುದ್ದಿ
ಟೋಲ್ ಬೂತ್ಗೆ ಲಾರಿ ಡಿಕ್ಕಿ ಹೊಡೆದು ಬೂತ್ ಸಂಪೂರ್ಣ ಧ್ವಂಸವಾಗಿರುವ ಘಟನೆ ತಿ.ನರಸೀಪುರ ಬಳಿಯ ಯಡದೊರೆ ಟೋಲ್ ಬೂತ್ ಬಳಿ ಜರುಗಿದೆ.
ಟೋಲ್ ಬೂತ್ ಧ್ವಂಸ
ಕಳೆದ ರಾತ್ರಿ ಮೈಸೂರು ಕಡೆಯಿಂದ ತಿ.ನರಸೀಪುರ ಕಡೆ ಬರುತ್ತಿದ್ದ ಲಾರಿ ಯಡದೊರೆ ಟೋಲ್ ಬೂತ್ ಬಳಿ ಚಾಲಕನ ಅಜಾಗರೂಕತೆಯಿಂದ ಟೋಲ್ ಬೂತ್ ಗೆ ಡಿಕ್ಕಿ ಹೊಡೆದಿದ್ದು , ಟೋಲ್ ಬೂತ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಆದರೆ ಅಲ್ಲಿ ಸಿಬ್ಬಂದಿ ಇಲ್ಲದ ಕಾರಣ ಅನಾಹುತ ತಪ್ಪಿದೆ.
ಇನ್ನು ಘಟನೆ ನಡೆಯುತ್ತಿದ್ದಂತೆ ಲಾರಿ ಬಿಟ್ಟು ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಸ್ಥಳೀಯ ಗಂರ್ಗೇಶ್ವರಿ ಗ್ರಾಮದ ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಿ.ನರಸೀಪುರ ಪೊಲೀಸರು ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.