ಕರ್ನಾಟಕ

karnataka

ETV Bharat / state

ಮೈಸೂರು: ಆಟೋ ಚಾಲಕರ ಮೇಲೆ ಲಾಕ್​ಡೌನ್​ ಎಫೆಕ್ಟ್​​

ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಅಲ್ಲಿನ ಮುಖ್ಯಮಂತ್ರಿಗಳು ಪರಿಹಾರ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವುದು ಕೂಡ ಇಲ್ಲ. ಇಲ್ಲಿ ನಿಜವಾಗಿಯೂ ಸರ್ಕಾರ ಇಲ್ಲ, ಬೇಜವಾಬ್ದಾರಿ ಸರ್ಕಾರ, ಬರಿ ಹಣ ಮಾಡುವುದರಲ್ಲೇ ಮುಳುಗಿದ್ದಾರೆ. ಕೋವಿಡ್​ನಿಂದ, ವ್ಯಾಕ್ಸಿನ್​ನಿಂದ, ಬೆಡ್​ಗಳಿಂದಲೂ ಸಹ ಹಣ ಮಾಡುತ್ತಿದ್ದಾರೆ. ಅವರಿಗೆ ನಮ್ಮಂತವರ ಕಷ್ಟ ಅರ್ಥವಾಗುವುದಿಲ್ಲವೆಂದು ಆಟೋ ಚಾಲಕರು ಅಸಮಾಧಾನ ಹೊರಹಾಕಿದ್ದಾರೆ.

lockdown effects on auto drivers
ಆಟೋ ಚಾಲಕರ ಮೇಲೆ ಲಾಕ್​ಡೌನ್​ ಎಫೆಕ್ಟ್​​

By

Published : May 11, 2021, 2:22 PM IST

ಮೈಸೂರು: ಲಾಕ್​ಡೌನ್​ನಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸರ್ಕಾರ ನೆರವಿಗೆ ಬರಬೇಕೆಂದು ಜಿಲ್ಲೆಯ ಆಟೋ ಚಾಲಕರು ಮನವಿ ಮಾಡಿದ್ದಾರೆ.

ನಗರದ ರೈಲ್ವೆ ನಿಲ್ದಾಣದ ಪ್ರೀಪೇಡ್ ಆಟೋ ನಿಲ್ದಾಣದಲ್ಲಿ ಜನರಿಗಾಗಿ ಕಾಯುತ್ತಿದ್ದ ಚಾಲಕರ ಸಮಸ್ಯೆಯನ್ನು ನಮ್ಮ ಪ್ರತಿನಿಧಿ ವಿಚಾರಿಸಿದಾಗ ಆಟೋ ಚಾಲಕರೊಬ್ಬರು ಹೇಳಿದ್ದು ಹೀಗೆ.

ಆಟೋ ಚಾಲಕರ ಮೇಲೆ ಲಾಕ್​ಡೌನ್​ ಎಫೆಕ್ಟ್​​

ಮೊದಲ ಲಾಕ್‌ಡೌನ್​ನಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿದ್ದೇವೆ. ಇದೀಗ ಮತ್ತೆ ಲಾಕ್​ಡೌನ್ ಮಾಡಿದ್ದಾರೆ. ಬಾಡಿಗೆ ಸಿಕ್ಕರೆ ಜೀವನ, ಇಲ್ಲದಿದ್ದರೆ ಒಂದೊತ್ತಿನ ಊಟಕ್ಕೂ ಪರದಾಟ. ಸರ್ಕಾರ ಎಚ್ಚೆತ್ತುಕೊಂಡು ಆಟೋ ಚಾಲಕರಿಗೆ ಸ್ವಲ್ಪವಾದರೂ ಪರಿಹಾರ ನೀಡಬೇಕು. ಇಲ್ಲದಿದ್ದರೆ ಜೀವನ ನಿರ್ವಹಣೆ ಕಷ್ಟ ಎಂದು ತಮ್ಮ ಅಳಲು ತೋಡಿಕೊಂಡರು.

ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಪ್ರೀಪೇಡ್ ಆಟೋ ನಿಲ್ದಾಣಕ್ಕೆ ರೋಗಕ್ಕೆ ಹೆದರದೆ ಬರುತ್ತೇವೆ‌. ಹೊಟ್ಟೆಗೆ ಊಟವಿಲ್ಲದೆ ಸಾಯುವುದಕ್ಕಿಂತ ಕೋವಿಡ್​ನಿಂದ ಸತ್ತರೂ ಪರವಾಗಿಲ್ಲ ಎಂಬ ಸ್ಥಿತಿಯಲ್ಲಿ ನಾವಿದ್ದೇವೆ. ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಅಲ್ಲಿನ ಮುಖ್ಯಮಂತ್ರಿಗಳು ಪರಿಹಾರ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಯಾವುದೂ ಕೂಡ ಇಲ್ಲ. ಇಲ್ಲಿ ನಿಜವಾಗಿಯೂ ಸರ್ಕಾರ ಇಲ್ಲ, ಬೇಜವಾಬ್ದಾರಿ ಸರ್ಕಾರ, ಬರೇ ಹಣ ಮಾಡುವುದರಲ್ಲೇ ಮುಳುಗಿದ್ದಾರೆ. ಕೋವಿಡ್​ನಿಂದ, ವ್ಯಾಕ್ಸಿನ್​ನಿಂದ, ಬೆಡ್​ಗಳಿಂದಲೂ ಸಹ ಹಣ ಮಾಡುತ್ತಿದ್ದಾರೆ. ಅವರಿಗೆ ನಮ್ಮಂತವರ ಕಷ್ಟ ಅರ್ಥವಾಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ:ಬೆಳಗಾವಿಯಲ್ಲಿ ಸೋಂಕಿತರ ಆರೈಕೆಗಾಗಿ ಇವೆ 1,995 ಆಕ್ಸಿಜನ್​ಯುಕ್ತ ಬೆಡ್ ವ್ಯವಸ್ಥೆ

ಕೂಡಲೇ ಸರ್ಕಾರ ಆಟೋ ಚಾಲಕರಿಗೆ ಪರಿಹಾರ ನೀಡಬೇಕೆಂದು ಚಾಲಕ ಯೋಗೇಶ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ABOUT THE AUTHOR

...view details