ಕರ್ನಾಟಕ

karnataka

ETV Bharat / state

ಸಂಕಷ್ಟಕ್ಕೆ ಸಿಕ್ಕ ಅನಾಥಾಲಯಗಳಿಗೆ ಜಿಲ್ಲಾಡಳಿತ, ಪಾಲಿಕೆ ನೆರವು, ದಾನಿಗಳ ಸಹಾಯಹಸ್ತ - ಲಾಕ್​ಡೌನ್​ ಸಮಸ್ಯೆಗಳು

ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಅನಾಥಾಯಗಳು ಸಂಕಷ್ಟಕ್ಕೆ ಸಿಲುಕಿವೆ. ಇವರ ಸಹಾಯಕ್ಕೆ ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಬಂದಿದ್ದು, ಇವರ ಮೂರು ಹೊತ್ತಿನ ಊಟವನ್ನು ಪಾಲಿಕೆಯೇ ನೋಡಿಕೊಳ್ಳುತ್ತಿದೆ.

orphanage homes
ವೃದ್ಧಾಶ್ರಮಗಳು

By

Published : Apr 13, 2020, 6:39 PM IST

ಮೈಸೂರು: ಕೊರೊನಾ ವೈರಸ್​ ಸೋಂಕಿನಿಂದ ಇಡೀ ದೇಶವೇ ಲಾಕ್​ಡೌನ್​ ಆಗಿದ್ದು ಇದರ ನೇರ ಪರಿಣಾಮ ಅನಾಥರು, ನಿರ್ಗತಿಕರು, ಭಿಕ್ಷುಕರ ಮೇಲೆ ಉಂಟಾಗಿದೆ. ಇವರ ನಿರ್ವಹಣೆಗಾಗಿ ಮೈಸೂರು ಜಿಲ್ಲಾಡಳಿತ ಮಾರ್ಚ್ 22ರಿಂದ ಅನಾಥರು, ನಿರಾಶ್ರಿತರು ಹಾಗೂ ಭಿಕ್ಷುಕರಿಗಾಗಿ 19 ಸಾಂತ್ವನ ಕೇಂದ್ರಗಳನ್ನು ತೆರೆದಿದೆ.

ವೃದ್ಧಾಶ್ರಮಗಳು

ಈ ಕೇಂದ್ರಗಳಲ್ಲಿ ಪ್ರತಿದಿನ 8 ಸಾವಿರ ಮಂದಿಗೆ ಬೆಳಗ್ಗೆಯು ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತವಾಗಿ ಊಟ ನೀಡಲಾಗುತ್ತಿದೆ. ಇದರ ಜೊತೆಗೆ ಕೆಲವು ದಾನಿಗಳಿಂದ, ವಿವಿಧ ಸಂಘ ಸಂಸ್ಥೆಗಳಿಂದ ಬಂದ ಊಟದ ಜೊತೆಗೆ ಮಹಾನಗರ ಪಾಲಿಕೆಯು ಪ್ರತಿದಿನ ಮೂರು ಹೊತ್ತು ಊಟವನ್ನು ಬಡವರಿಗೆ, ಅಶಕ್ತರಿಗೆ, ನಿರಾಶ್ರಿತರಿಗೆ ನೀಡುತ್ತಾ ಬಂದಿದೆ.

ದೇವಸ್ಥಾನದ ದಾಸೋಹ ಭವನಗಳಿಂದಲೂ ಸಹ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ಜಿಲ್ಲಾಧಿಕಾರಿಗಳು ಕೆಲವು ಸಂಘ ಸಂಸ್ಥೆಗಳ ಸಹಾಯದಿಂದ ಅನಾಥಾಲಯಗಳಿಗೆ ಆಹಾರ ಒದಗಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ತಸ್ನೀಂ ತಿಳಿಸಿದ್ದಾರೆ.

ಈ ಜಿಲ್ಲಾಡಳಿತ, ಪಾಲಿಕೆ ಜೊತೆಗೆ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು ಲಾಕ್​ಡೌನ್​ ಸಂಕಷ್ಟದ ಪರಿಹಾರಕ್ಕೆ ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ABOUT THE AUTHOR

...view details