ಕರ್ನಾಟಕ

karnataka

By

Published : Apr 30, 2020, 2:31 PM IST

ETV Bharat / state

ಸಾಲ ಮಾಡಿಯಾದ್ರೂ ನೆರವಾಗುವ ಅನಿವಾರ್ಯತೆ... ಲೀಡರ್ಸ್​ಗೂ ತಟ್ಟಿದ ಲಾಕ್​ಡೌನ್​ ಎಫೆಕ್ಟ್​​..!

ಲಾಕ್​ಡೌನ್​ ಶುರುವಾದಾಗ ಬಡವರ ನೆರವಿಗೆ ಧಾವಿಸುತ್ತಿದ್ದವರ ಸಂಖ್ಯೆ ಇದೀಗ ಇಳಿಮುಖವಾಗುತ್ತಿದೆ. ಇದರಿಂದ ಮೈಸೂರು ಜಿಲ್ಲಾಡಳಿತಕ್ಕೂ ಹೊರೆಯಾಗಿದೆ.

lockdown
ಲಾಕ್​ಡೌನ್​

ಮೈಸೂರು:ಲಾಕ್​​​ಡೌನ್​ನಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸಹಾಯ ಮಾಡಬೇಕಾದ ಜನಪ್ರತಿನಿಧಿಗಳು ಹಾಗೂ ಮಾಜಿ ಜನಪ್ರತಿನಿಧಿಗಳೂ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರವರ ರಾಜಕೀಯ ಭವಿಷ್ಯಕ್ಕಾಗಿ ಸಾಲ ಮಾಡಿ‌ ಆದರೂ ಸಹಾಯ ಮಾಡಬೇಕಾದ ಅನಿವಾರ್ಯತೆಗೆ ರಾಜಕೀಯ ಮುಖಂಡರು ಒಳಗಾಗಿದ್ದಾರೆ.

ಲಾಕ್​ಡೌನ್​

ಮೊದಲ ಹಂತದ ಲಾಕ್​ಡೌನ್​ ಶುರುವಾದ ವೇಳೆ ಜಿಲ್ಲೆಯಲ್ಲಿ ಸ್ಥಳೀಯವಾಗಿ ಮಂತ್ರಿಗಳು, ಶಾಸಕರು, ಕಾರ್ಪೊರೇಟರ್​​​​​ಗಳ ಜೊತೆಗೆ ಮಾಜಿ ಜನಪ್ರತಿನಿಧಿಗಳು ಕೂಡಾ ಜನರಿಗೆ ಸಹಾಯಹಸ್ತ ನೀಡಿದ್ದರು. ತಮ್ಮ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಊಟ, ಆಹಾರದ ಕಿಟ್ ಸೇರಿದಂತೆ ಮೂಲ ಅವಶ್ಯಕತೆಗಳನ್ನು ಪೂರೈಸಲು ಬಿರುಸಿನ ಚಟುವಟಿಕೆಗಳನ್ನು ಆರಂಭಿಸಿದ್ದರು. ತಮ್ಮ ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸಾಲ ಮಾಡಿ ಆದರೂ ತಮ್ಮ ಕ್ಷೇತ್ರದ ಜನರಿಗೆ ಆಹಾರ ಕಿಟ್​ಗಳನ್ನು ವಿತರಿಸಿದ್ದೂ ಕೂಡಾ ಉಂಟು.

ಆದರೆ, ಕೊರೊನಾ ಕಡಿಮೆಯಾಗದ ಹಿನ್ನೆಲೆಯಲ್ಲಿ ಎರಡನೇ ಹಂತದ ಲಾಕ್​ಡೌನ್ ಶುರುವಾದಾಗ ಬಡವರ ಸಂಕಷ್ಟಕ್ಕೆ ಕರಗಿ ನೆರವು ನೀಡುವವರ ಸಂಖ್ಯೆ ಕಡಿಮೆಯಾಯಿತು ಇದರಿಂದ ಜಿಲ್ಲಾಡಳಿತಕ್ಕೆ ಸ್ವಲ್ಪ ಹೊರೆ ಅನ್ನಿಸಿದ್ದು, 19 ಸಾಂತ್ವನ ಕೇಂದ್ರಗಳಲ್ಲಿನ ವಲಸೆ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರಿಗೆ ಸರ್ಕಾರ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಕೆಲವು ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲಾಗಿದೆ.

ಮೈಸೂರಿನ ಕೆಲವೊಂದು ಪ್ರದೇಶಗಳಲ್ಲಿ ಕೆಲವು ಜನಪ್ರತಿನಿಧಿಗಳು ಟೋಕನ್​ ವ್ಯವಸ್ಥೆ ಜಾರಿಗೊಳಿಸಿದ್ದು, ಬಡವರಿಗೆ ಟೋಕನ್​ ನೀಡಿ ನಿಗದಿಪಡಿಸಿದ ಅಂಗಡಿಯಲ್ಲಿ ರೇಷನ್​ ಪಡೆಯುವಂತೆ ಸೂಚಿಸಿದ್ದಾರೆ. ಗೆದ್ದ ಅಭ್ಯರ್ಥಿಗಳು ಮತ್ತೊಮ್ಮೆ ಗೆಲ್ಲುವ ಸನ್ನಾಹದಲ್ಲಿ ಹಾಗೂ ಸೋತ ಅಭ್ಯರ್ಥಿಗಳು ಗೆಲ್ಲುವ ಪಣ ತೊಟ್ಟು ಬಡವರಿಗೆ ನೆರವು ನೀಡಲು ಮುಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳೂ ಕೂಡಾ ಉಂಟು. ಇದರಿಂದಾಗಿ ಆದಷ್ಟು ಬೇಗ ಲಾಕ್​ಡೌನ್​ ಮುಗಿಯಲಿ ಎಂಬ ಆಶಯ ಅವರದ್ದಾಗಿದೆ.

ABOUT THE AUTHOR

...view details