ಮೈಸೂರು:ಲಾಕ್ಡೌನ್ನಿಂದ ಎಲ್ಲರಂತೆ ದೋಬಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸುಮಾರು ಒಂದೂವರೆ ಸಾವಿರ ಹೋಟೆಲ್, ಲಾಡ್ಜ್ಗಳು ಬಂದ್ ಆಗಿದ್ದು, ಇವುಗಳನ್ನೇ ನಂಬಿದ್ದ ದೋಬಿ ಘಾಟ್ನ ಕೆಲಸಗಾರರು, ಇಸ್ತ್ರಿ ಅಂಗಡಿಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೊರೊನಾ ಕೊಳೆಯಲ್ಲಿ ಕೊಚ್ಚಿ ಹೋದ ದೋಬಿಗಳ ಬದುಕು; ದೋಬಿಘಾಟ್ಗಳು ಸ್ತಬ್ಧ
ಲಾಕ್ಡೌನ್ನಿಂದಾಗ ದೋಬಿಗಳ ಬದುಕೂ ಕೂಡಾ ಬೀದಿಗೆ ಬಂದಿದೆ. ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ದೋಬಿ ಘಾಟ್ಗಳೂ ಬಿಕೋ ಅಂತಿವೆ. ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೋಬಿ ಘಾಟ್
ನಗರದಲ್ಲಿ 4 ದೋಬಿ ಘಾಟ್ಗಳು ಇದ್ದು, ಇಲ್ಲಿ ಕೆಲಸ ಮಾಡುವವರ ಆರ್ಥಿಕ ಪರಿಸ್ಥಿತಿ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದೆ ಅಂತಾರೆ ಇಲ್ಲಿಯೇ ಕೆಲಸ ಮಾಡುವ ಬೈರೇಶ್. ಇದೇ ಕಸುಬನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಇವರು ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಲಾಕ್ಡೌನ್ ಶುರುವಾದ ನಂತರ ಕೆಲವು ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ನಾಯಕರು ಪಡಿತರ ಕಿಟ್ ಕೊಟ್ಟಿದ್ದು ಇದರಿಂದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿತ್ತು. ಲಾಡ್ಜ್ಗಳಲ್ಲಿ ಕೆಲಸ ಮಾಡುವವರಿಗೆ ಇನ್ನೂ ಸರಿಯಾದ ಸಂಬಳ ಸಿಗುತ್ತಿಲ್ಲ ಎಂಬುದು ಇವರ ಅಳಲಾಗಿದೆ.