ಕರ್ನಾಟಕ

karnataka

ETV Bharat / state

ನಾಡಹಬ್ಬ ದಸರಾಗೆ ಸಾಹಿತಿ ಎಸ್ ಎಲ್ ಭೈರಪ್ಪ ವಿಧ್ಯುಕ್ತ ಚಾಲನೆ.. ಮಲ್ಲಿಗೆನಗರಿಯಲ್ಲಿ ಹಬ್ಬದ ಸಡಗರವೋ ಸಡಗರ.. - ದಸರಾಗೆ ಸಾಹಿತಿ ಎಸ್.ಎಲ್.ಭೈರಪ್ಪ ಚಾಲನೆ

ನಾಡಹಬ್ಬ ದಸರಾಗೆ ನಾಡ ಅಧಿದೇವತೆ ಶ್ರೀ ಚಾಮುಂಡಿ ತಾಯಿಗೆ ವೃಶ್ಚಿಕ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ವಿಧ್ಯುಕ್ತ ಚಾಲನೆ ನೀಡಿದರು.

ನಾಡಹಬ್ಬ ದಸರಾಗೆ ಸಾಹಿತಿ ಎಸ್.ಎಲ್.ಭೈರಪ್ಪ ವಿದ್ಯುಕ್ತ ಚಾಲನೆ..!

By

Published : Sep 29, 2019, 10:39 AM IST

ಮೈಸೂರು:ನಾಡಹಬ್ಬ ದಸರಾಗೆ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ವೃಶ್ಚಿಕ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ವಿಧ್ಯುಕ್ತವಾಗಿ ಚಾಲನೆ ನೀಡಿದರು.

9 ದಿನಗಳ ಕಾಲ ನಡೆಯಲಿರುವ ನಾಡಹಬ್ಬ ದಸರಾಗೆ ಇಂದು ನಾಡ ಅಧಿದೇವತೆ ಚಾಮುಂಡಿ ತಾಯಿಗೆ 9.38 ರಿಂದ 10.25 ರವರೆಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಖ್ಯಾತ ಸಾಹಿತಿ ಸರಸ್ವತಿ ಸಮ್ಮಾನ್ ಎಸ್ ಎಲ್ ಭೈರಪ್ಪ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಸಂಸದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾಡಹಬ್ಬ ದಸರಾಗೆ ಸಾಹಿತಿ ಎಸ್ ಎಲ್ ಭೈರಪ್ಪ ವಿಧ್ಯುಕ್ತ ಚಾಲನೆ!

ಹಲವು ಕಾರ್ಯಕ್ರಮಗಳಿಗೆ ಚಾಲನೆ:
ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾಗೆ ಚಾಲನೆ ಸಿಕ್ಕಿದ್ದು,ಇಲ್ಲಿಗೆ ಪೊಲೀಸ್ ಸಹಾಯ ಕೇಂದ್ರ ಹಾಗೂ ದಸರಾ ಕ್ರೀಡಾ ಜ್ಯೋತಿಯನ್ನು ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ಮಾಡಿದ ನಂತರ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ, ಸ್ಕೌಟ್ಸ್ ಅಂಡ್ ಗೈಡ್ಸ್‌ ಮೈದಾನದಲ್ಲಿ ಆಹಾರಮೇಳ, ದಸರಾ ಕುಸ್ತಿ, ವಸ್ತುಪ್ರದರ್ಶನ, ಫಲ ಪುಷ್ಪ ಪ್ರದರ್ಶನ, ಮಕ್ಕಳ ಕ್ರೀಡಾಕೂಟ, ಪುಸ್ತಕ ಮಳಿಗೆ ಹಾಗೂ ವಿದ್ಯುತ್ ದೀಪಾಲಂಕಾರಗಳಿಗೆ ಇಲಾಖೆಯ ಸಚಿವರು, ಸಂಸದರು ಹಾಗೂ ಶಾಸಕರಿಂದ ಚಾಲನೆ ದೊರೆಯಿತು.

ABOUT THE AUTHOR

...view details