ಮೈಸೂರು: ಇಂದು ಕಾವೇರಿ ಉಳಿವಿಗಾಗಿ ನಾವೆಲ್ಲರೂ ಕೆಲಸ ಮಾಡುವುದು ನಮ್ಮ ಕರ್ತವ್ಯ. ಬನ್ನಿ ಎಲ್ಲರೂ ಕೈ ಜೋಡಿಸಿ ಬೆಂಬಲ ನೀಡೋಣ ಎಂದು ಯದುವೀರ್ ಕರೆ ನೀಡಿದ್ದಾರೆ.
ಕಾವೇರಿಗಾಗಿ ಎಲ್ಲರೂ ಕೈ ಜೋಡಿಸೋಣ: ಯದುವೀರ್ ಕರೆ - ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಅರಮನೆಯ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈಶ ಫೌಂಡೇಶನ್ ಆರಂಭಿಸಿರುವ ಕಾವೇರಿ ಕೂಗು ರ‍್ಯಾಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಇಂದು ಅರಮನೆಯ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈಶ ಫೌಂಡೇಶನ್ ಆರಂಭಿಸಿರುವ ಕಾವೇರಿ ಕೂಗು ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಇಂದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ಪ್ರಮುಖ ಪಾತ್ರವಹಿಸಿದೆ. ಹಾಗಾಗಿ ಇದರ ಉಳಿವಿಗಾಗಿ ಕಾವೇರಿ ಕೂಗು ಎಂಬ ರ‍್ಯಾಲಿ ಚಾಲನೆ ಮಾಡಲಾಗುತ್ತಿದೆ.
ಇಂದು ರೈತರು ಅರಣ್ಯ ಬೆಳೆಸುವ ಕಡೆ ಗಮನ ಹರಿಸುತ್ತಿಲ್ಲ. ಆದರೆ ಹಿಂದಿನ ರೈತರು ಅರಣ್ಯ ಬೆಳೆಸುವ ಕೃಷಿ ಮಾಡುತ್ತಿದ್ದರು. ಈಗ ಅದು ಆಗುತ್ತಿಲ್ಲ. ತುರ್ತಾಗಿ ಕಾವೇರಿ ಪ್ರದೇಶದಲ್ಲಿ ಅರಣ್ಯಗಳನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ. ಇದರಿಂದ ಉತ್ತಮ ಮಳೆ ಬರುತ್ತದೆ. ಜನರಿಗೆ ಸರಿಯಾದ ಸಮಯಕ್ಕೆ ನೀರು ಸಿಗುತ್ತದೆ. ಕಾವೇರಿಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕೆಲಸ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೈ ಜೋಡಿಸೋಣ ಎಂದು ಯದುವೀರ್ ಕರೆ ನೀಡಿದರು.