ಮೈಸೂರು:ಕಾಡುಹಂದಿ ಬೇಟೆಗಾಗಿ ಇಟ್ಟಿದ ಉರುಳಿಗೆ ಸಿಲುಕಿ 6 ವರ್ಷದ ಗಂಡು ಚಿರತೆ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ತಿತಿಮಿತಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಪಿರಿಯಾಪಟ್ಟಣ: ಕಾಡುಹಂದಿ ಬೇಟೆಗಾಗಿ ಇಟ್ಟಿದ ಉರುಳಿಗೆ ಸಿಲುಕಿ ಚಿರತೆ ಸಾವು - ಮೈಸೂರು ಸುದ್ದಿ
ಕಾಡುಹಂದಿ ಬೇಟೆಗಾಗಿ ಇಟ್ಟಿದ ಉರುಳಿಗೆ ಸಿಲುಕಿ 6 ವರ್ಷದ ಗಂಡು ಚಿರತೆ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ತಿತಿಮಿತಿ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಪಿರಿಯಾಪಟ್ಟಣ: ಕಾಡುಹಂದಿ ಬೇಟೆಗಾಗಿ ಇಟ್ಟಿದ ಉರುಳಿಗೆ ಸಿಲುಕಿ ಚಿರತೆ ಸಾವು
ಬೇಟೆಗಾರರು ಆಗಾಗ ತಿತಿಮಿತಿ ಅರಣ್ಯ ಪ್ರದೇಶದೊಳಗೆ ನುಸುಳಿ ಕಾಡುಹಂದಿ ಬೇಟೆಗಾಗಿ ಉರುಳು ಹಾಕುತ್ತಿದ್ದರು. ಅದೇ ಉರುಳಿಗೆ ಆಹಾರ ಅರಸಿ ಬಂದ ಚಿರತೆ ಸಿಲುಕಿ ಹೊರಬರಲಾರದೆ ಮೃತಪಟ್ಟಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ನಿರ್ದೇಶಕ ಮಹೇಶ್ ಕುಮಾರ್, ಎಸಿಫ್ ಸತೀಶ್, ವೈದ್ಯ ಡಾ.ಮುಜೀಬ್ ಪರಿಶೀಲನೆ ನಡೆಸಿ, ಮೃತ ಚಿರತೆ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.