ಕರ್ನಾಟಕ

karnataka

ETV Bharat / state

ಕಬಿನಿ ನದಿಯಲ್ಲಿ ಚಿರತೆಯ ಕಳೇಬರ ಪತ್ತೆ... ಅರಣ್ಯಾಧಿಕಾರಿಗಳಿಂದ ಪರಿಶೀಲನೆ - ಕಬಿನಿ ನದಿಯಲ್ಲಿ ಚಿರತೆಯ ಮೃತ ದೇಹ ಪತ್ತೆ

ಹೆಚ್.ಡಿ ಕೋಟೆ ತಾಲೂಕಿನಲ್ಲಿರುವ ಕಬನಿ ನದಿಯಲ್ಲಿ ಸಾವನ್ನಪ್ಪಿರುವ ಚಿರತೆಯ ಕಳೇಬರ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.

Leopard's dead body found in Kabini River
ಕಬಿನಿ ನದಿಯಲ್ಲಿ ಚಿರತೆಯ ಮೃತ ದೇಹ ಪತ್ತೆ.

By

Published : Apr 17, 2020, 12:57 PM IST

ಮೈಸೂರು:ಹೆಚ್.ಡಿ. ಕೋಟೆ ಬಳಿಯ ಸರಗೂರಿನ ಹಾಲುಗಡೆ ಸಮೀಪ ಕಬಿನಿ ನದಿಯಲ್ಲಿ ಚಿರತೆಯೊಂದರ ಕಳೇಬರ ಪತ್ತೆಯಾಗಿದೆ.

ಚಿರತೆಯ ಕಳೇಬರ ಪರಿಶೀಲಿಸಿದ ಅರಣ್ಯಾಧಿಕಾರಿಗಳು
ಕಬನಿ ನದಿಯಲ್ಲಿ ಸಾವನ್ನಪ್ಪಿರುವ ಚಿರತೆಯ ಕಳೇಬರ ಸರಗೂರು ಸಮೀಪದ ಚಿಕ್ಕದೇವಮ್ಮ ಬೆಟ್ಟದ ಹಾಲುಗಡ ಬಳಿ ಪತ್ತೆಯಾಗಿದೆ.

ಈ ಚಿರತೆ ಹೇಗೆ ಸಾವನ್ನಪ್ಪಿದೆ ಹಾಗೂ ಹೇಗೆ ನದಿಯಲ್ಲಿ ತೇಲಿಕೊಂಡು ಬಂತು ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಈ ಸಂಬಂಧ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details