ಮೈಸೂರು: ಮೂರು ದಿನಗಳ ನಿರಂತರ ಕಾರ್ಯಾಚರಣೆ ನಡೆಸುವ ಮೂಲಕ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿದೆ.
ಹೆಚ್.ಡಿ. ಕೋಟೆ ತಾಲೂಕಿನ ಕಾರಾಪುರ ಗ್ರಾಮದ ನೂರಡಿ ಬಾವಿಯಲ್ಲಿ ಶನಿವಾರ ಚಿರತೆ ಬಿದ್ದಿದ್ದನ್ನು ಗಮನಿಸಿದ ಗ್ರಾಮಸ್ಥರು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಪರಿಶೀಲನೆ ಮಾಡಿದ ಅಧಿಕಾರಿಗಳು ಅಲ್ಲಿ ಚಿರತೆ ಇಲ್ಲವೆಂದು ಹೇಳಿದ್ದರು.
ಇದನ್ನು ಓದಿ: ಮೂರು ದಿನಗಳ ಬಳಿಕ ಪಾಳು ಬಾವಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭ
ಆದರೆ, ಪಟ್ಟು ಬಿಡದ ಗ್ರಾಮಸ್ಥರು ಚಿರತೆ ಇದೆ ಸೆರೆ ಹಿಡಿಯಿರಿ ಎಂದು ಮನವಿ ಮಾಡಿಕೊಂಡರು. ನಂತರ ಸಿಸಿಟಿವಿಯನ್ನು ಬಾವಿಗೆ ಬಿಟ್ಟು ಪರಿಶೀಲಿಸಿದಾಗ ಚಿರತೆ ಇರುವುದು ದೃಢಪಟ್ಟಿದ್ದು, ನಂತರ ಅದನ್ನು ಜೋಪಾನವಾಗಿ ಸೆರೆ ಹಿಡಿದಿದ್ದು, ಚೇತರಿಕೆಯಾದ ನಂತರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.