ಕರ್ನಾಟಕ

karnataka

ETV Bharat / state

ಮೈಸೂರು : ಸೋಲಾರ್ ತಂತಿಗೆ ಸಿಲುಕಿ ಚಿರತೆ ನರಳಾಟ, ಅರಣ್ಯ ಇಲಾಖೆಯಿಂದ ಸೇಫ್

ಬಾಳೆತೋಟದಲ್ಲಿ ಸೋಲಾರ್ ತಂತಿಗೆ ಸಿಲುಕಿದ್ದ ನಾಲ್ಕು ವರ್ಷದ ಗಂಡು ಚಿರತೆ ಬಲಗಾಲು ಗಾಯಗೊಂಡ ಹಿನ್ನೆಲೆ ಸೋಲಾರ್ ತಂತಿಯಿಂದ ಬಿಡಿಸಿಕೊಳ್ಳಲು ಚೀರಾಡಿದೆ‌. ಇದನ್ನು ರಾತ್ರಿಯೇ ನುಗು ಅರಣ್ಯ ಇಲಾಖೆಯ ಆರ್​ಎಫ್​ಒ ಗಮನಕ್ಕೆ ತರಲಾಗಿದೆ..

leopard-protected-by-forest-department-staffs-in-mysore
ಸೋಲಾರ್ ತಂತಿಗೆ ಸಿಲುಕಿ ನರಳಾಡುತ್ತಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ

By

Published : Jan 23, 2022, 4:15 PM IST

ಮೈಸೂರು :ಬಾಳೆ ತೋಟದಲ್ಲಿ ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಸಿಲುಕಿ ನರಳಾಡುತ್ತಿದ್ದ ಚಿರತೆಯನ್ನು ರಕ್ಷಿಸಿರುವ ಘಟನೆ ಸರಗೂರು ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೋಲಾರ್ ತಂತಿಗೆ ಸಿಲುಕಿ ಚಿರತೆ ನರಳಾಟ

ಬಾಳೆತೋಟದಲ್ಲಿ ಸೋಲಾರ್ ತಂತಿಗೆ ಸಿಲುಕಿದ್ದ ನಾಲ್ಕು ವರ್ಷದ ಗಂಡು ಚಿರತೆ ಬಲಗಾಲು ಗಾಯಗೊಂಡ ಹಿನ್ನೆಲೆ ಸೋಲಾರ್ ತಂತಿಯಿಂದ ಬಿಡಿಸಿಕೊಳ್ಳಲು ಚೀರಾಡಿದೆ‌. ಇದನ್ನು ರಾತ್ರಿಯೇ ನುಗು ಅರಣ್ಯ ಇಲಾಖೆಯ ಆರ್​ಎಫ್​ಒ ಗಮನಕ್ಕೆ ತರಲಾಗಿದೆ.

ನಂತರ ಹೆಡಿಯಾಲ ಅರಣ್ಯ ಇಲಾಖೆ ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಅರವಳಿಕೆ ಮದ್ದನ್ನು ನೀಡಿ ಚಿರತೆ ಸೆರೆ ಹಿಡಿದಿದ್ದಾರೆ. ಚಿಕಿತ್ಸೆ ನೀಡಿದ ಬಳಿಕ ಅರಣ್ಯದೊಳಗೆ ಬಿಡಲಾಗುವುದು ಎಂದು ಈ ಸಂದರ್ಭದಲ್ಲಿ ಎಸಿಎಫ್ ತಿಳಿಸಿದ್ದಾರೆ.

ಓದಿ:ತುಮಕೂರಿನಲ್ಲಿ ಕೆಎಸ್‌ಆರ್‌ಟಿಸಿ​ ಬಸ್‌ ಅಪಘಾತಕ್ಕೀಡು.. ಇಬ್ಬರು ಸಾವು, 10 ಮಂದಿಗೆ ಗಾಯ

For All Latest Updates

TAGGED:

ABOUT THE AUTHOR

...view details