ಕರ್ನಾಟಕ

karnataka

ETV Bharat / state

ಮೈಸೂರು: ಉರುಳಿಗೆ ಸಿಲುಕಿ ಚಿರತೆ ಸಾವು - ಮೈಸೂರಿನಲ್ಲಿ ಉರುಳಿಗೆ ಸಿಲುಕಿ ಚಿರತೆ ಸಾವು

ಮೈಸೂರಿನಲ್ಲಿ ಕಾಡು ಪ್ರಾಣಿಯ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟಿದೆ.

Leopard dies after falling into a snare
ಉರುಳಿಗೆ ಸಿಲುಕಿ ಚಿರತೆ ಸಾವು

By

Published : Mar 4, 2021, 8:59 PM IST

ಮೈಸೂರು: ಕಾಡು ಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಹೊಸವಾರಂಚಿ ಬಳಿ ನಡೆದಿದೆ.

ಹೊಸವಾರಂಚಿ ಗ್ರಾಮದ ರೈತ ಸಾದಿಕ್ ಇಕ್ಬಾಲ್ ಎಂಬವರ ಹೊಲದಲ್ಲಿ ಕಾಡು ಪ್ರಾಣಿಯ ಬೇಟೆಗಾಗಿ ಉರುಳು ಹಾಕಲಾಗಿತ್ತು. ಆಹಾರ ಅರಸಿ ಬಂದ 4 ವರ್ಷದ ಗಂಡು ಚಿರತೆ ಈ ಉರುಳಿಗೆ ಸಿಲುಕಿ ಮೃತಪಟ್ಟಿದೆ.

ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details