ಕರ್ನಾಟಕ

karnataka

ETV Bharat / state

ಮೈಸೂರು: ಹುಲ್ಲಿನ ಮೆದೆಯಲ್ಲಿ ಅವಿತುಕೊಂಡಿದ್ದ ಚಿರತೆ ಮರಿ ರಕ್ಷಣೆ - Mysore

ಹುಲ್ಲಿನ ಮೆದೆಯೊಳಗೆ ಅವಿತುಕೊಂಡಿದ್ದ ಒಂದು ವರ್ಷದ ಚಿರತೆ ಮರಿಯನ್ನ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

Leopard cub protection
ಚಿರತೆ ಮರಿ ರಕ್ಷಣೆ

By

Published : Feb 24, 2021, 1:32 PM IST

ಮೈಸೂರು: ಹುಲ್ಲಿನ ಮೆದೆಯೊಳಗೆ ಅವಿತುಕೊಂಡಿದ್ದ ಚಿರತೆ ಮರಿಯನ್ನ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಹುಲ್ಲಿನ ಮೆದೆಯಲ್ಲಿ ಅವಿತುಕೊಂಡಿದ್ದ ಚಿರತೆ ಮರಿ ರಕ್ಷಣೆ..

ಹೆಚ್‌‌.ಡಿ.ಕೋಟೆ ತಾಲೂಕಿನ ಹೆಬ್ಬಲಕುಪ್ಪೆ ಗ್ರಾಮದ ಜಮೀನಿನಲ್ಲಿರುವ ಹುಲ್ಲಿನ ಮೆದೆಗೆ ಚಿರತೆ ಮರಿ ನುಸುಳಿರುವುದನ್ನ ಕಂಡ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೆದೆ ಸುತ್ತ ಜಾಲರಿ ಬೋನ್ ಹಾಕಿ, ಚಿರತೆ ಮರಿ ಆಚೆ ಬರುವ ಜಾಗದಲ್ಲಿ ಬೋನು ಇಟ್ಟಿದ್ದಾರೆ. ಮಂಗಳವಾರ ಮಧ್ಯರಾತ್ರಿ ಹೊರ ಬಂದ ಒಂದು ವರ್ಷದ ಚಿರತೆ ಮರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಸದ್ಯ ಸೆರೆಯಾಗಿರುವ ಚಿರತೆ ಮರಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಇಂದು ಬಿಟ್ಟಿದ್ದಾರೆ.

ABOUT THE AUTHOR

...view details