ಮೈಸೂರು:ಅಮ್ಮನಿಗಾಗಿ ಕಾದು ಬೆಚ್ಚನೆ ಮಲಗಿದ್ದ ಮೂರು ಮುದ್ದು ಚಿರತೆ ಮರಿಗಳನ್ನು ಕಂಡ ಗ್ರಾಮಸ್ಥರು ಎತ್ತಿ ಮುದ್ದಾಡಿದ್ದಾರೆ.
ಮೈಸೂರು: ಕಬ್ಬು ಕಟಾವು ಮಾಡುವಾಗ ಕಂಡ ಚಿರತೆ ಮರಿಗಳನ್ನು ಮುದ್ದಾಡಿದ ಗ್ರಾಮಸ್ಥರು - ಮೈಸೂರಿನಲ್ಲಿ 3 ಚಿರತೆ ಮರಿಗಳು ಪತ್ತೆ
ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದಲ್ಲಿ ಊಟಿ ನಂಜುಂಡೇಗೌಡ ಎಂಬುವವರ ಕಬ್ಬಿನ ಗದ್ದೆಯಲ್ಲಿ 8 ದಿನಗಳ ಹಿಂದೆ ಜನ್ಮ ತಾಳಿರುವ 3 ಚಿರತೆ ಮರಿಗಳು ಪತ್ತೆಯಾಗಿವೆ.
![ಮೈಸೂರು: ಕಬ್ಬು ಕಟಾವು ಮಾಡುವಾಗ ಕಂಡ ಚಿರತೆ ಮರಿಗಳನ್ನು ಮುದ್ದಾಡಿದ ಗ್ರಾಮಸ್ಥರು Leopard cub found in Mysore](https://etvbharatimages.akamaized.net/etvbharat/prod-images/768-512-6276466-thumbnail-3x2-net.jpg)
ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದಲ್ಲಿ ಊಟಿ ನಂಜುಂಡೇಗೌಡ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವಾಗ 8 ದಿನಗಳ ಹಿಂದೆ ಜನ್ಮ ತಾಳಿರುವ ಮರಿಗಳು ಪತ್ತೆಯಾಗಿವೆ. ಇದನ್ನು ಕಂಡು ಭಯಭೀತರಾದ ಗ್ರಾಮಸ್ಥರು ಹತ್ತಿರ ಹೋಗಲು ಹೆದರಿದ್ದಾರೆ. ಮರಿಗಳ ಬಳಿ ಒಂದು ಗಂಟೆ ಕಳೆದರು ತಾಯಿ ಚಿರತೆ ಬಾರದೇ ಇದ್ದದರಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ, ನಂತರ ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ.
ಈಗಾಗಲೇ ಮೂರುನಾಲ್ಕು ಚಿರತೆ ಸೆರೆ ಹಿಡಿದಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಈಗ ಸಿಕ್ಕಿರುವ ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅಲ್ಲದೇ ತಾಯಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟಿದ್ದಾರೆ.