ಮೈಸೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಹಾಗೂ ಮೇಕೆ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.
ಹೆಚ್ ಡಿ ಕೋಟೆಯಲ್ಲಿ ಚಿರತೆ ಉಪಟಳ: ವ್ಯಕ್ತಿ ಮೇಲೆ ದಾಳಿ ಮಾಡಿ ಮೇಕೆ ಹೊತ್ತೊಯ್ದ ಚೀತಾ! - Leopard in Mysore
ಮೈಸೂರು ಜಿಲ್ಲೆಯಲ್ಲಿ ಮತ್ತೆ ಚಿರತೆ ಉಪಟಳ ಹೆಚ್ಚಾಗಿದೆ. ವ್ಯಕ್ತಿವೋರ್ವನ ಮೇಲೆ ದಾಳಿ ನಡೆಸಿ ಚಿರತೆ ಗಾಯಗೊಳಿಸಿದೆ.
ಮೈಸೂರಿನಲ್ಲಿ ಚಿರತೆ ಉಪಟಳ
ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಹೆಗ್ಗಡಪುರ ಗ್ರಾಮದ ನಿವಾಸಿ ಚೆನ್ನಬಸವ ನಾಯಕ ಎಂಬ ರೈತನ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಭುಜಕ್ಕೆ ಗಂಭೀರ ಗಾಯವಾಗಿದೆ. ಈತನ ಪತ್ನಿ ಕಿರುಚಿಕೊಂಡ ಕಾರಣ ರೈತರು ಜಮೀನಿಗೆ ಬಂದಿದ್ದರಿಂದ ಚಿರತೆ ಪರಾರಿಯಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಶಿಂಡೇಹಳ್ಳಿ ಗ್ರಾಮದ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಬಲಿ ಪಡೆದಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ಜಮೀನಿಗೆ ಹೋಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.