ಮೈಸೂರು:ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿನ ಲಕ್ಷ್ಮಿ ಜಿರಾಫೆಗೆ ಮರಿಯೊಂದು ಜನಿಸಿದೆ. ಈ ಮೂಲಕ ಜಿರಾಫೆ ಮರಿಗಳ ದಾಖಲೆ ನಿರ್ಮಾಣವಾಗಿದೆ.
ಲಕ್ಷ್ಮಿ ಮತ್ತು ಭರತ್ ಜೋಡಿ ಜಿರಾಫೆಗೆ ಜುಲೈ 12ರಂದು ಒಂದು ಗಂಡು ಮರಿ ಜಿರಾಫೆ ಜನನವಾಗಿದೆ. ಲಕ್ಷ್ಮಿಗೆ ಇದು ನಾಲ್ಕನೇ ಮರಿಯಾಗಿದೆ. ಮೈಸೂರು ಮೃಗಾಲಯದಲ್ಲಿ ಇಲ್ಲಿಯವರೆಗೆ 22 ಜಿರಾಫೆ ಮರಿಗಳ(17 ಗಂಡು ಮತ್ತು 5 ಹೆಣ್ಣು) ಜನನದ ದಾಖಲೆಯನ್ನು ಹೊಂದಿದೆ.