ಕರ್ನಾಟಕ

karnataka

ETV Bharat / state

ಬೈಕ್​ನಿಂದ ಬಿದ್ದ ಮಹಿಳೆ: ಲಾರಿ ಹರಿದು ಸ್ಥಳದಲ್ಲೇ ಸಾವು - ಮೈಸೂರಿನ ಬನ್ನೂರು

ಮೈಸೂರಿನ ಬನ್ನೂರು ಬಳಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಮಹಿಳೆಯ ಮೇಲೆ ಹಿಂಬದಿಯಿಂದ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಲಾರಿ ಹರಿದು ಮಹಿಳೆ ಸಾವು

By

Published : Aug 12, 2019, 9:58 PM IST

ಮೈಸೂರು: ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಮಹಿಳೆಯ ಮೇಲೆ ಹಿಂಬದಿಯಿಂದ ಲಾರಿ ಹರಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬನ್ನೂರು ಬಳಿ ನಡೆದಿದೆ.

ಲಾರಿ ಹರಿದು ಸ್ಥಳದಲ್ಲೇ ಮಹಿಳೆ ಸಾವು

ಕವಿತ (37) ಮೃತ ದುರ್ದೈವಿ. ಈಕೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಫೋಟೋಗ್ರಾಫರ್ ಕಂ ಕಲಾವಿದೆ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ತನ್ನ ಗಂಡ ಲೋಕೇಶ್​​ನೊಂದಿಗೆ ಮಳೆಯಿಂದ ಮೈದುಂಬಿ ಹರಿಯುತ್ತಿರುವ ಶಿವನಸಮುದ್ರ ಜಲಪಾತವನ್ನು ನೋಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಬನ್ನೂರು ಬಳಿ ರಿಪೇರಿ ಮಾಡುತ್ತಿದ್ದ ಸೇತುವೆ ಬಳಿ ಬೈಕ್​​ನಿಂದ ಆಯಾತಪ್ಪಿ ಬಿದ್ದಿದ್ದಾಳೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿ ಈಕೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಈ ಸಂಬಂಧ ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details