ಮೈಸೂರು: ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಬಳಿ ನಡೆದಿದೆ.
ಶಿಕ್ಷಣ ಸಚಿವರ ಕಾರಿಗೆ ಲಾರಿ ಡಿಕ್ಕಿ: ಅದೃಷ್ಟವಶಾತ್ ಅಪಾಯದಿಂದ ಪಾರು - undefined
ಸಚಿವ ಜಿ.ಟಿ.ದೇವೇಗೌಡ ಮಳವಳ್ಳಿಗೆ ತೆರಳುವ ವೇಳೆ ಕಾರಿಗೆ ಲಾರಿ ಡಿಕ್ಕಿ. ಕಾರಿನ ಮುಂಭಾಗ ಹಾಗೂ ಡೋರ್ ಭಾಗ ಜಖಂ. ಅದೃಷ್ಟವಶಾತ್ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಚಿವ ಜಿ.ಟಿ.ದೇವೇಗೌಡ
ಇಂದು ಸಚಿವ ಜಿ.ಟಿ.ದೇವೇಗೌಡ ಮಳವಳ್ಳಿಯಲ್ಲಿ ನಿಖಿಲ್ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಈ ವೇಳೆ ಲಾರಿಯೊಂದು ಅವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಹಾಗೂ ಡೋರ್ ಭಾಗ ಜಖಂ ಆಗಿದೆ. ಅದೃಷ್ಟವಶಾತ್ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.