ಕರ್ನಾಟಕ

karnataka

ETV Bharat / state

ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ತಯಾರಾಗ್ತಿದೆ 2 ಲಕ್ಷ ಲಾಡು..! ಯಾತಕ್ಕಾಗಿ? - ಹೊಸ ವರ್ಷಕ್ಕೆ ೨ ಲಕ್ಷ ಲಾಡು ಸಿದ್ದತೆ

ಹೊಸ ವರ್ಷದ ದಿನ ಯೋಗನರಸಿಂಹ ಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಿಗಾಗಿ ಲಾಡುಗಳನ್ನು ತಯಾರಿಸಲಾಗುತ್ತಿದ್ದು, ಸುಮಾರು ಎರಡು ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ವ್ಯವಸ್ಥಾಪಕರು ತಿಳಿಸಿದ್ದಾರೆ.

Yoganarasimha Swamy Temple
ಹೊಸ ವರ್ಷಕ್ಕೆ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ತಯಾರಾಗ್ತಿದೆ 2 ಲಕ್ಷ ಲಾಡು..!

By

Published : Dec 27, 2019, 5:13 PM IST

ಮೈಸೂರು: ಹೊಸ ವರ್ಷಕ್ಕೆ ಭಕ್ತಾದಿಗಳಿಗೆ ಹಂಚಲು 2 ಲಕ್ಷ ಲಾಡುಗಳನ್ನು ನಗರದ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಸಿದ್ಧ ಮಾಡಲಾಗಿದೆ.

ಹೊಸ ವರ್ಷಕ್ಕೆ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ತಯಾರಾಗ್ತಿದೆ 2 ಲಕ್ಷ ಲಾಡು..!

ಹೊಸ ವರ್ಷದ ದಿನ ಯೋಗನರಸಿಂಹ ಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಿಗಾಗಿ ಎರಡು ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದ್ದು, ಈಗಾಗಲೇ ಈ ಲಾಡುಗಳ ತಯಾರಿ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ 20 ಕ್ವಿಂಟಾಲ್ ಪುಳಿಯೊಗರೆ ಸಹ ಅಂದೇ ಮಾಡಲಾಗುತ್ತಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಶ್ರೀನಿವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಲಾಡುಗಳ ತಯಾರಿಕೆ ಹೇಗೆ?: ಡಿಸೆಂಬರ್ 20 ರಿಂದ ಲಾಡುಗಳ ತಯಾರಿಕೆ ಆರಂಭವಾಗಿದ್ದು, ಡಿಸೆಂಬರ್ 30 ರ ವರೆಗೆ ಈ ಲಾಡುಗಳನ್ನು ತಯಾರಿಸಲಾಗುತ್ತದೆ. ಇದಕ್ಕಾಗಿ 50 ಜನ ಬಾಣಸಿಗರು 25 ಜನ ವ್ಯವಸ್ಥಾಪಕರು ನಿತ್ಯ ಕೆಲಸ ಮಾಡುತ್ತಿದ್ದು, ಲಾಡು ತಯಾರಿಕ ಸ್ಥಳಕ್ಕೆ ಸಾರ್ವಜನಿಕರು ಪ್ರವೇಶ ಮಾಡುವಂತಿಲ್ಲ. ಈ ಸ್ಥಳದಲ್ಲಿ ಸಿಸಿಟಿವಿಯನ್ನು ಹಾಕಲಾಗಿದ್ದು, ಆರೋಗ್ಯಾಧಿಕಾರಿಗಳ ಸಲಹೆ ಸೂಚನೆಗಳ ಜೊತೆಗೆ ಅವರ ಅನುಮತಿಯನ್ನು ಪಡೆಯಲಾಗಿದೆ ಎಂದರು.

ಪ್ರತಿ ಲಾಡುಗಳು 200 ಗ್ರಾಮ ತೂಕವಿದ್ದು, ವಿಶೇಷ ಅತಿಥಿಗಳಿಗಾಗಿ 2ಕೆ.ಜಿ. ತೂಕದ 5000 ಲಾಡುಗಳನ್ನು ಮಾಡಲಾಗುತ್ತಿದ್ದು, ಈ ಲಾಡು ತಯಾರಿಕೆಗೆ 50 ಕ್ವಿಂಟಾಲ್ ಕಡಲೆ ಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 4000 ಲೀಟರ್ ಖಾದ್ಯ ತೈಲ, 200 ಕೆ.ಜಿ. ಗೋಡಂಬಿ, 200 ಕೆ.ಜಿ.ಒಣದ್ರಾಕ್ಷಿ, 100 ಕೆ.ಜಿ. ಬಾದಾಮಿ, 200 ಕೆ.ಜಿ.ಡೈಮಂಡ್ ಸಕ್ಕರೆ, 500 ಕೆ.ಜಿ.ಬೂರಾ ಸಕ್ಕರೆ, 10 ಕೆ.ಜಿ.ಪಿಸ್ತಾ, 20 ಕೆ.ಜಿ.ಏಲಕ್ಕಿ, 20 ಕೆ.ಜಿ.ಜಾಯಿಕಾಯಿ ಮತ್ತು ಜಾಪತ್ರೆ, 5 ಕೆ.ಜಿ.ಕರ್ಪೂರ, 100 ಕೆ.ಜಿ ಲವಂಗವನ್ನು ಬಳಸಿ ಈ 2 ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದೆ ಎಂದು ವ್ಯವಸ್ಥಾಪಕರಾದ ಶ್ರೀನಿವಾಸ್ ವಿವರಿಸಿದರು.

ABOUT THE AUTHOR

...view details