ಮೈಸೂರು: ನವರಾತ್ರಿಯ ಉತ್ಸವ ಆರಂಭವಾಯಿತೆಂದರೆ ಮೈಸೂರಿಗೆ ದೇಶ-ವಿದೇಶ, ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದಲೂ ಸಹ ಪ್ರವಾಸಿಗರು ಬರುತ್ತಾರೆ. ನವರಾತ್ರಿಯ ಸಂದರ್ಭದಲ್ಲಿ ಅರಮನೆಗೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರವಾಸಿಗರು ಬಾರದೆ ಆದಾಯ ಗಣನೀಯವಾಗಿ ಇಳಿಮುಖವಾಗಿದೆ.
ಈ ವರ್ಷದ ದಸರಾ ನವರಾತ್ರಿಯ 10 ದಿನದ ಸಂದರ್ಭದಲ್ಲಿ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ದಸರಾದ ಆಕರ್ಷಣೆಯಾದ ಅಂಬಾವಿಲಾಸ ಅರಮನೆಗೆ ವಾರಾಂತ್ಯಕ್ಕೆ 10 ರಿಂದ 20 ಸಾವಿರ ವರೆಗೂ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ನವರಾತ್ರಿ ಉತ್ಸವದಿಂದ ವಿಜಯದಶಮಿವರೆಗೂ ಕೇವಲ 9,516 ಮಂದಿಯಷ್ಟೇ ಭೇಟಿ ನೀಡಿದ್ದಾರೆ. ಜಂಬೂಸವಾರಿ ವೀಕ್ಷಣೆಗೆ ಕೆಲವೇ ಮಂದಿಗೆ ಅವಕಾಶ ನೀಡಲಾಗಿತ್ತಾದರೂ, ಜಂಬುಸವಾರಿಯ ಬಳಿಕವೂ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿರಲಿಲ್ಲ.