ಮೈಸೂರು: ರಂಗಾಯಣ ಇತಿಹಾಸದಲ್ಲಿಯೇ ನಾಟಕದಿಂದ ಇದೇ ಮೊದಲ ಬಾರಿಗೆ ಬೃಹತ್ ಮೊತ್ತ ಕಲೆಕ್ಷನ್ ಆಗಿದೆ.
ಪದ್ಮಶ್ರೀ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯ ನಾಟಕ ಮೂರೇ ದಿನದ ಪ್ರದರ್ಶನದಲ್ಲಿ 7.50 ಲಕ್ಷ ರೂ. ಗಳಿಸಿದೆ.
ಮೈಸೂರು: ರಂಗಾಯಣ ಇತಿಹಾಸದಲ್ಲಿಯೇ ನಾಟಕದಿಂದ ಇದೇ ಮೊದಲ ಬಾರಿಗೆ ಬೃಹತ್ ಮೊತ್ತ ಕಲೆಕ್ಷನ್ ಆಗಿದೆ.
ಪದ್ಮಶ್ರೀ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿಯ ನಾಟಕ ಮೂರೇ ದಿನದ ಪ್ರದರ್ಶನದಲ್ಲಿ 7.50 ಲಕ್ಷ ರೂ. ಗಳಿಸಿದೆ.
ಮೈಸೂರಿನ ಕಲಾಮಂದಿರದಲ್ಲಿ ಮಾ. 12ರಿಂದ 14ರವರೆಗೆ ಎಸ್.ಎಲ್.ಭೈರಪ್ಪನವರ 'ಪರ್ವ' ಕಾದಂಬರಿಯನ್ನ ನಾಟಕ ರೂಪಕ್ಕಿಳಿಸಿ ಪ್ರದರ್ಶಿಸಲಾಯಿತು.
1000, 500, 250 ರೂ. ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಮೂರು ದಿನದಲ್ಲಿ 2400 ಮಂದಿ ಪರ್ವ ನಾಟಕವನ್ನು ವೀಕ್ಷಣೆ ಮಾಡಿದ್ದಾರೆ. ಎಂಟೂವರೆ ಗಂಟೆಗಳ ಕಾಲ ಪರ್ವ ನಾಟಕ ಪ್ರದರ್ಶನಗೊಂಡರೂ ರಂಗ ಪ್ರೇಕ್ಷಕರು ಖುಷಿಯಿಂದಲೇ ನೋಡಿದ್ದಾರೆ.
ಇದರಿಂದ ಪರ್ವ ನಾಟಕದ ಕಲಾವಿದರಿಗೆ, ನಿರ್ದೇಶಕರಿಗೆ, ರಂಗಾಯಣ ನಿರ್ದೇಶಕರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ರಂಗಪ್ರೇಮಿಗಳ ಕೋರಿಕೆಯ ಮೇರೆಗೆ ರಂಗಾಯಣದ ಭೂಮಿಗೀತದಲ್ಲಿ ಪರ್ವ ನಾಟಕ ಮೂರು ದಿನ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಈಗಾಗಲೇ ಟಿಕೆಟ್ ಸೋಲ್ಡೌಟ್ ಆಗಿದೆ.