ಕರ್ನಾಟಕ

karnataka

ETV Bharat / state

ಭೈರಪ್ಪನವರು ದೆಹಲಿಗೆ ಹೋಗಿ ರೈತರ ಕಷ್ಟ ನೋಡಲಿ : ಕುರುಬೂರು ಶಾಂತಕುಮಾರ್ - karnataka farmers

ಇದಕ್ಕೂ ಮೊದಲ ಭೈರಪ್ಪ ರೈತರ ಜಮೀನಿಗೆ ಹೋಗಿ ಖಾಸಗಿಯವರು ಎಪಿಎಂಸಿಗಿಂತ ಜಾಸ್ತಿ ಬೆಲೆ ಕೊಟ್ಟು ಖರೀದಿ ಮಾಡ್ತಾರೆ. ಇದರಿಂದ ತಕ್ಷಣವೇ ರೈತರಿಗೆ ಹಣ ಸಿಗುತ್ತೆ. ಅಲ್ಲದೇ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ಪಂಜಾಬ್‌ ಮೂಲದ ರೈತರು ಮಾತ್ರ ಎಂದಿದ್ದರು..

Kurubur Shanthakumar, President of the Sugarcane Growers Association
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್

By

Published : Jan 9, 2021, 3:09 PM IST

Updated : Jan 9, 2021, 3:27 PM IST

ಮೈಸೂರು :ಹಿರಿಯ ಸಾಹಿತಿ ಎಸ್‌ ​​ಎಲ್ ಭೈರಪ್ಪನವರು ದೆಹಲಿಗೆ ಹೋಗಿ ರೈತರ ಪ್ರತಿಭಟನೆಯ ಕಷ್ಟವನ್ನು ನೋಡಲಿ, ಆಮೇಲೆ ರೈತರ ಬಗ್ಗೆ ಮಾತನಾಡಲಿ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಎಸ್ ಎಲ್ ಭೈರಪ್ಪನವರು ಯಾವುದೇ ಹುದ್ದೆ ಹಾಗೂ ಸ್ಥಾನಕ್ಕಾಗಿ ಸರ್ಕಾರವನ್ನು ಓಲೈಕೆ ಮಾಡಬಾರದು.‌ ರೈತರ ಕಷ್ಟವನ್ನು ಹತ್ತಿರದಿಂದ ಮಾತನಾಡಬೇಕು.‌ ಹಿರಿಯ ಸಾಹಿತಿಗಳಾಗಿ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದರು.

ದೆಹಲಿಯಲ್ಲಿ ಪಂಜಾಬಿ ರೈತರು ಮಾತ್ರ ಪ್ರತಿಭಟನೆ ಮಾಡುತ್ತಿಲ್ಲ,‌ ಎಲ್ಲ ರಾಜ್ಯಗಳ ರೈತರು ಪ್ರತಿಭಟಿಸುತ್ತಿದ್ದಾರೆ. ಕರ್ನಾಟಕದ ರೈತರು ಕೂಡ ಭಾಗಿಯಾಗಿದ್ದಾರೆ ಎಂದರು. ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಯೋ ಸಿಮ್ ಫೋಟ್೯ ಮಾಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದಕ್ಕೂ ಮೊದಲ ಭೈರಪ್ಪ ರೈತರ ಜಮೀನಿಗೆ ಹೋಗಿ ಖಾಸಗಿಯವರು ಎಪಿಎಂಸಿಗಿಂತ ಜಾಸ್ತಿ ಬೆಲೆ ಕೊಟ್ಟು ಖರೀದಿ ಮಾಡ್ತಾರೆ. ಇದರಿಂದ ತಕ್ಷಣವೇ ರೈತರಿಗೆ ಹಣ ಸಿಗುತ್ತೆ. ಅಲ್ಲದೇ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ಪಂಜಾಬ್‌ ಮೂಲದ ರೈತರು ಮಾತ್ರ ಎಂದಿದ್ದರು.

ಇದನ್ನೂ ಓದಿ:ದೆಹಲಿಯಲ್ಲಿ ಪಂಜಾಬ್‌ನ ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ: ಎಸ್.ಎಲ್.ಭೈರಪ್ಪ

Last Updated : Jan 9, 2021, 3:27 PM IST

ABOUT THE AUTHOR

...view details