ಕರ್ನಾಟಕ

karnataka

ETV Bharat / state

15 ಲಕ್ಷ ದೀಪ ಬೆಳೆಗಿದ್ರೇ ಏನ್ ಬಂತು, ಮೋದಿ ರೈತರ ದೀಪ ಬೆಳಗಲಿ.. ಮಾಜಿ ಸಿಎಂ ಕುಮಾರಸ್ವಾಮಿ - ರೈತರ ಬಾಳಿನ ದೀಪ ಬೆಳಗಿ ಅಂತ ಮೋದಿಗೆ ಹೆಚ್​ಡಿಕೆ ಸಲಹೆ ಸುದ್ದಿ

ಲವ್ ಜಿಹಾದ್ ವಿರುದ್ಧ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಲವ್ ಜಿಹಾದ್‌ಗಿಂತಲೂ ಮುಖ್ಯವಾದ ಹಲವಾರು ಸಮಸ್ಯೆಗಳು ರಾಜ್ಯದಲ್ಲಿವೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಲಿ..

kumarswamy
ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

By

Published : Dec 2, 2020, 2:02 PM IST

ಮೈಸೂರು :ಪ್ರಧಾನಿ ಮೋದಿ ಅವರು ದೀಪ ಹಚ್ಚುವ ಬದಲು ರೈತರ ಬಾಳಿನ ದೀಪ ಬೆಳಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು

ಹೆಚ್ ಡಿ ಕೋಟೆ ರಿಂಗ್ ರಸ್ತೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾರಾಣಾಸಿಗೆ ಹೋಗಿ ಮೋದಿ ದೀಪ ಬೆಳಗಿದ್ದಾರೆ. ಅದರ ಬದಲು ಲಕ್ಷಾಂತರ ರೈತರ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಚಳಿಯಿಂದ ಇಬ್ಬರು ರೈತರು ಮೃತಪಟ್ಟಿದ್ದಾರೆ. ಮೊದಲು ರೈತರ ಬಾಳಿನ ದೀಪ ಬೆಳಗಲಿ ಎಂದರು.

ಲವ್ ಜಿಹಾದ್ ವಿರುದ್ಧ ಕಾಯ್ದೆ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಲವ್ ಜಿಹಾದ್‌ಗಿಂತಲೂ ಮುಖ್ಯವಾದ ಹಲವಾರು ಸಮಸ್ಯೆಗಳು ರಾಜ್ಯದಲ್ಲಿವೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಲಿ. ಸಿದ್ದರಾಮಯ್ಯ ಅವರು ದೊಡ್ಡವರು, ಕ್ರಾಸ್ ಬ್ರೀಡಿಂಗ್ ವಿಚಾರ ನನಗೆ ಬೇಡ. ಅದು ದೊಡ್ಡವರಿಗೆ ಸಂಬಂಧಪಟ್ಟ ವಿಚಾರ‌‌ ಎಂದರು.

ಶಾಸಕ ಜಿ ಟಿ ದೇವೇಗೌಡ ನಮ್ಮನ್ನ ಬಿಟ್ಟು ಎಲ್ಲಿ ಹೋಗಿದ್ದಾರೆ?
ಶಾಸಕ ಜಿ ಟಿ ದೇವೇಗೌಡಅವರು ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದಾರೆ. ಅವರೇ ಮೊನ್ನೆ ನಾನು ಜೆಡಿಎಸ್​ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಿಜೆಪಿಯವರ ವೇದಿಕೆ ಹಂಚಿಕೊಳ್ಳುವುದು ಸಾಮಾನ್ಯ.

ಇದಕ್ಕೆ ಬೇರೆ ರೀತಿಯ ಅರ್ಥಗಳನ್ನು ಕಲ್ಪಿಸಿಕೊಳ್ಳುವುದು ಬೇಡ‌ ಎಂದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರೇ ಮುಂದಾಳತ್ವದಲ್ಲೇ ಗ್ರಾಪ ಚುನಾವಣೆ ನಡೆಯಲಿದೆ. ಅವರು ಶಾಸಕರಾಗಿರುವಷ್ಟು ದಿನ ನಮ್ಮ ಪಕ್ಷವನ್ನೇ ಬೆಂಬಲಿಸಬೇಕು ಎಂದರು.

ಗ್ರಾಪಂ ಚುನಾವಣೆ ಪಕ್ಷಗಳ ಚಿಹ್ನೆ ಆಧಾರದ ಮೇಲೆ ನಡೆಯಲ್ಲ. ಹೀಗಾಗಿ, ಬಿಜೆಪಿಯವರ ಗ್ರಾಮ ಸ್ವರಾಜ್ ಕಾರ್ಯಕ್ರಮ ವರ್ಕೌಟ್ ಆಗಲ್ಲ. ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷ ಇರಲ್ಲ. ಒಂದೇ ಪಕ್ಷದ ಇಬ್ಬರು, ಮೂವರು ಸ್ಪರ್ಧೆ ಮಾಡಬಹುದು.

ಒಂದೇ ಕುಟುಂಬದ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾಗಿರುವುದನ್ನು ನೋಡಿದ್ದೇವೆ. ಸ್ಥಳೀಯ ವಿಚಾರದ ಆಧಾರದ ಮೇಲೆ ಗ್ರಾಪಂ ಚುನಾವಣೆ ನಡೆಯುತ್ತೆ‌. ಆದ್ದರಿಂದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.

ABOUT THE AUTHOR

...view details