ಕರ್ನಾಟಕ

karnataka

By

Published : Nov 28, 2019, 2:16 PM IST

ETV Bharat / state

ನಿಮ್ಮ ತರ ಹಲ್ ಕಿಸ್ಕೊಂಡು ನಿಂತಿಲ್ಲ... ಸದಾನಂದಗೌಡಗೆ ಕೌಂಟರ್​ ಕೊಟ್ಟ ಹೆಚ್​ಡಿಕೆ

ಇಂದು ಹುಣಸೂರಿನ ಧರ್ಮಪುರ ಗ್ರಾಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿರುದ್ದ ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ವಾಕ್ಸಮರ ನಡೆಸಿದ್ದಾರೆ.

ಹೆಚ್.​ಡಿ.ಕುಮಾರಸ್ವಾಮಿ
Kumaraswamy

ಮೈಸೂರು:ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತರ ಹಲ್ ಕಿಸ್ಕೊಂಡು ನಿಂತಿಲ್ಲ. ಎಷ್ಟು ಜನ ಬಡವರ ನಿಮ್ಮ ಮನೆ ಮುಂದೆ ಬಂದಿದ್ದಾರೆ. ನಮಗೆ ಬಡವರೊಂದಿಗೆ ಭಾವಾನಾತ್ಮಕ ಸಂಬಂಧವಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿರುದ್ಧ ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ವಾಕ್ಸಮರ ನಡೆಸಿದರು.

ಸದಾನಂದಗೌಡ ವಿರುದ್ಧ ಹೆಚ್​ಡಿಕೆ ವಾಕ್ಸಮರ

ಹುಣಸೂರಿನ ಧರ್ಮಪುರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಡವರ ಊಟಕ್ಕಾಗಿ ಪರದಾಡುತ್ತಿದ್ದಾರೆ. ನಾನು ಅವರ ಕಷ್ಟಗಳನ್ನು ಕಂಡು ಕಣ್ಣೀರು ಕಂಡು ಹಾಕುತ್ತೀನಿ. ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ. ಹೃದಯವೇ ಇಲ್ಲದ ನಿಮಗೆ ಕಣ್ಣೀರು ಹೇಗೆ ಬರುತ್ತದೆ. ಗ್ಲಿಸರಿನ್​ ಅವಶ್ಯಕತೆ ಇರುವುದು ನನಗಲ್ಲ, ನಿಮಗೆ. ನನಗೆ ನೋವು ಹೃದಯದಿಂದ ಬರುತ್ತದೆ. ಬಿಜೆಪಿಯವರು ಏನಾದರೂ ಹೇಳಲಿ. ನನ್ನ ಸಿದ್ದಾಂತಗಳೇ ಬೇರೆ. ಸದಾನಂದಾಗೌಡರನ್ನಾಗಲಿ, ಬಿಜೆಪಿಯನ್ನಾಗಿಲಿ ಮೆಚ್ಚಿಸಲು ನಾನು ಕಣ್ಣಿರು ಹಾಕುತ್ತಿಲ್ಲ. ನಿಮ್ಮಿಂದ ಸದಾನಂದಗೌಡ ಯಾವುತ್ತಾದರೂ ಬಡವರ ಕಣ್ಣೀರು ಒರೆಸಿದ್ದಾರಾ? , ಪ್ರವಾಹವಾಗಿದೆ ಎಷ್ಟು ಜಿಲ್ಲೆಗೆ ಭೇಟಿ ಕೊಟ್ಟರು? ಎಂದು ಟೀಕೆ ಮಾಡಿದರು.

ಈಗ ಚುನಾವಣೆಗೆ ಪ್ರವಾಹದಂತೆ ಹಣ ಹರಿಸುತ್ತಿದೆ. ಪ್ರವಾಹ ಸ್ಥಳಗಳಲ್ಲಿ ಯಾವ ಅಭಿವೃದ್ಧಿಯಾಗಿಲ್ಲ.ಈ ಕುರಿತು ಸದಾನಂದಗೌಡ ಪ್ರಶ್ನಿಸಿದ್ದಾರೆಯೇ? ನಮ್ಮ ಕಣ್ಣೀರು ಪೇಟೆಂಟ್ ಅಂದ್ಕೊಳ್ಳಿ.ಆದರೆ ಬಡವರ ಜೊತೆ ಚೆಲ್ಲಾಟ ಅಡಬೇಡಿ ಎಂದರು.

ನಾನು ರೆಸಾರ್ಟ್​ನಲ್ಲಿ ಕುಳಿತು ರಾಜಕಾರಣ ಮಾಡಿಲ್ಲ. ಅರವಿಂದ ಲಿಂಬಾವಳಿ ಅವರು ರೆಸಾರ್ಟ್​ನಲ್ಲಿ​ ಏನು ಮಾಡಿದ್ರು, ಅದಕ್ಕಾಗಿ ಕೋರ್ಟ್​ ಹೋಗಿ ಸ್ಟೇ ತಂದರು. ಈಗ ಮತ್ತೊಬ್ಬ ಬಿಜೆಪಿ ಶಾಸಕನ ರಾಸಲೀಲೆ ಹೊರ ಬಂದಿದೆ‌. ಆದರೆ ನಾವು ಆ ತರ ಅಲ್ಲ ಎಂದು ಕುಟುಕಿದರು.

ಸ್ಕ್ರ್ಯಾಪ್​ಗಾಗಿ ಬಂದಿದ್ದ ವಿಶ್ವನಾಥ್:
ಎಚ್.ವಿಶ್ವನಾಥ್ ಅವರು ನನ್ನ ಮನೆಗೆ ಹಲವು ಬಾರಿ ಬಂದಿದ್ದಾರೆ. ಆದರೆ ಎಂದಿಗೂ ದೇವರಾಜ ಅರಸು ಜಿಲ್ಲೆ ಹಾಗೂ ಅಭಿವೃದ್ಧಿ ಚರ್ಚೆ ಮಾಡಲಿಲ್ಲ. ಸಾರಿಗೆ ಬಸ್ ಸ್ಕ್ರ್ಯಾಪ್ ಕೇಳುತ್ತಿದ್ದರು‌. ಅದರಿಂದ ಬರುವ ಕಮಿಷನ್ ನಿಂದ ಪಡೆಯಲು ಸಹಾಯ ಮಾಡು ಎಂದು ಮನವಿ ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ವಿಶ್ವನಾಥ್ ಮುಂದೆ ಕುರುಬರ ಜನಾಂಗವನ್ನು ಹೀಯಾಳಿಸಿದ್ದರೆ. ನನ್ನ ಬಾಯಿಗೆ ಹುಳ ಬೀಳಲ್ಲಿ, ಸಾ.ರಾ.ಮಹೇಶ ಹಾಗೂ ವಿಶ್ವನಾಥ್ ಒಳಜಗಳದ ಸಾ.ರಾ.ಮಹೇಶ್​ ನನ್ನೊಂದಿಗೆ ಮಾತನಾಡಿಲ್ಲ ಎಂದರು.

ಡಿ.09ರ ನಂತರ ರಾಜ್ಯದಲ್ಲಿ ಧ್ರುವೀಕರಣ ವಾಗಲಿದೆ. ಬಿಜೆಪಿ ಸರ್ಕಾರಕ್ಕೆ ಅಂದೆ ಕೊನೆ ದಿನವಾಗಲಿದೆ. ಮಹಾರಾಷ್ಟ್ರ ಸಿಎಂ ಅಧಿಕಾರಕ್ಕೆ ಸ್ವೀಕಾರಕ್ಕೆ ನನಗೂ ಆಹ್ವಾನ ಬಂದಿತ್ತು. ಆದರೆ ಚುನಾವಣೆ ಇರುವುದರಿಂದ ಹೋಗಲು ಆಗುವುದಿಲ್ಲ ಎಂದರು.

For All Latest Updates

ABOUT THE AUTHOR

...view details