ಮೈಸೂರು: ಕುಮಾರಸ್ವಾಮಿ ಮಾತಿನ ವೈಖರಿ ಬಗ್ಗೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಜಯಪುರ ಗ್ರಾ.ಪಂ. ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಟಿ. ದೇವೇಗೌಡರು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೀರಾ. ಲೋಕಸಭಾ ಸದಸ್ಯರಾಗಿದ್ದೀರಾ. ಆದರೆ ಅಭಿಮಾನಿಗಳ ಹಾಗೂ ಕಾರ್ಯಕರ್ತರ ಬಳಿ ಮೊದಲಿನಂತೆ ತಾವು (ಕುಮಾರಸ್ವಾಮಿ) ನಡೆದುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿ.ಟಿ.ದೇವೇಗೌಡ ಮಾತನಾಡಿದರು. ಮಾತು ಆಡಿ ಕೆಟ್ತು, ಮುತ್ತು ಒಡೆದು ಕೆಡ್ತು, ಮಾತನಾಡುವಾಗ ಹಿಂದೆ ಏನ್ ಮಾತಾಡಿದ್ರಿ, ಈಗ ಏನ್ ಮಾತಾಡ್ತೀರಿ ಅಂತ ಯೋಚನೆ ಮಾಡಿ ಮಾತನಾಡಿ ಅಂತ ಹೇಳಿದ್ದೆ, ಈಗಲೂ ಟ್ವೀಟ್ ಮಾಡಿ ಜನರ ವಿರೋಧ ಮಾಡಿಕೊಳ್ಳುವುದು ಬೇಡ. ಕುಮಾರಸ್ವಾಮಿ ಅವರ ಮಾತುಗಳಿಂದ ಅಭಿಮಾನಿಗಳಿಗೆ ನೋವಾಗುತ್ತಿದೆ. ಆದರಿಂದ ಅವರ ಮಾತಿನಲ್ಲಿ ಬದಲಾವಣೆಯಾಗಲೇಬೇಕಿದೆ ಎಂದರು.
ಕುಮಾರಸ್ವಾಮಿಗಿದ್ದ ಅಭಿಮಾನಿಗಳು ಯಾವ ನಾಯಕರಿಗೂ ಇರಲಿಲ್ಲ. ಯೋಚನೆ ಮಾಡಲಿ, ಸೋತಾಗ ಆತ್ಮಾವಲೋನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಅನರ್ಹ ಶಾಸಕರು ಅರ್ಹರಾಗಿದ್ದಾರೆ. ಕೋಟ್೯ ತೀರ್ಪು ವಿರುದ್ಧ ಜನ ತೀರ್ಪು ಮಾಡಿದ್ದಾರೆ. ಯಡಿಯೂರಪ್ಪ ಮಾತನಾಡಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.