ಮೈಸೂರು : ಲಾಕ್ಡೌನ್ ಸಡಿಲಿಕೆಯಿಂದ ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಇದರಿಂದ ಪ್ರಯಾಣಿಕರ ಫುಲ್ಖುಷಿಯಾಗಿದ್ದಾರೆ.
ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ವಿವಿಧ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭಗೊಂಡಿದ್ದು, ಬೆಂಗಳೂರಿಗೆ ತೆರಳಲು ಪ್ರಯಾಣಿಕರು ಉತ್ಸಾಹ ತೋರಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಹೋಗುವ ಪ್ರಯಾಣಿಕರು ಅಧಿಕವಾಗಿದ್ದಾರೆ.
ಬಸ್ ಸಂಚಾರಕ್ಕೆ ಪ್ರಯಾಣಿಕರು ಫುಲ್ ಖುಷ್ 100 ಕ್ಕೂ ಹೆಚ್ಚು ಬಸ್ಗಳು ಸಂಚಾರ ಮಾಡುತ್ತಿವೆ. ನಗರ ಬಸ್ ನಿಲ್ದಾಣದಲ್ಲಿ 68 ಬಸ್ಗಳು ಸಂಚಾರ ಮಾಡುತ್ತಿದ್ದು, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕನಿಗೆ ಥರ್ಮಲ್ ಸ್ಕ್ರಿನಿಂಗ್ ಮಾಡಿ, ಸ್ಯಾನಿಟೈಸರ್, ಮಾಸ್ಕ್ ಇದ್ದರಷ್ಟೇ ಒಳಗೆ ಬೀಡಲಾಗುತ್ತಿದೆ.
55 ದಿನಗಳಿಂದ ಬಸ್ ಸಂಚಾರವಿಲ್ಲದೇ ಪರದಾಡಿದ ಪ್ರಯಾಣಿಕರು, ಈಗ ಬಸ್ ಸಂಚಾರ ಕಂಡು ಖುಷಿಯಾಗಿದ್ದಾರೆ. ಅಲ್ಲದೇ ತಮ್ಮ ತಮ್ಮ ಊರಿಗೆ ತೆರಳಲು ಕಾದು ಕುಳಿತಿದ್ದಾರೆ.