ಕರ್ನಾಟಕ

karnataka

ETV Bharat / state

ಬೈಕ್​ಗೆ ದಾರಿ ಬಿಡದಕ್ಕೆ ಆಕ್ರೋಶ: KSRTC ಬಸ್​ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ! - KSRTC ಬಸ್​ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ

ಬೈಕ್​ಗೆ ದಾರಿ ಬಿಡದ ಕಾರಣಕ್ಕಾಗಿ ಬಸ್​​ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

KSRTC bus driver assaulted by bike driver
KSRTC bus driver assaulted by bike driver

By

Published : Jan 22, 2021, 12:21 AM IST

Updated : Jan 22, 2021, 10:05 AM IST

ಮೈಸೂರು:ಬಸ್​ ಓವರ್ ಟೇಕ್ ಮಾಡಲು ಬಿಡದ ಕೆಎಸ್​ಆರ್​ಟಿಸಿ ಚಾಲಕನ ಮೇಲೆ ಬೈಕ್ ಸವಾರನೋರ್ವ ಚಾಕುವಿನಿಂದ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಇದರಿಂದ ಬಸ್​ ಚಾಲಕ ಭೀಕರ ಹಲ್ಲೆಗೊಳಗಾಗಿದ್ದಾನೆ.

ಬೈಕ್​ ಸವಾರನಿಂದ ಭೀಕರ ಹಲ್ಲೆ

ಹುಣಸೂರು ತಾಲೂಕು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸರಾಮನಹಳ್ಳಿ ಬಳಿ ನಡೆದಿದೆ. ಪಿರಿಯಾಪಟ್ಟಣ ಡಿಪೋ ಸಾರಿಗೆ ಚಾಲಕ ವೆಂಕಟೇಶ್​ ಹಲ್ಲೆಗೊಳಗಾಗಿದ್ದಾನೆ. ಕೆ.ಆರ್.ನಗರಕ್ಕೆ ಬಸ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಹೊಸರಾಮನಹಳ್ಳಿ ಗೇಟ್ ಬಳಿ ಬೈಕ್​ ಸವಾರನಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡು ಬೈಕ್ ಸವಾರ ಬಸ್ ನಿಲ್ಲಿಸುವಂತೆ ಹೇಳಿದ್ದಾನೆ. ಈ ವೇಳೆ ಬಸ್​ನಿಂದ ಇಳಿದ ಡ್ರೈವರ್​ ವೆಂಕಟೇಶ್ ಹಾಗೂ ಬೈಕ್ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ.

ಬಸ್​ ಡ್ರೈವರ್ ಮೇಲೆ ಹಲ್ಲೆ

ಇದರಿಂದ ಆಕ್ರೋಶಗೊಂಡ ಬೈಕ್ ಸವಾರ ಸಾರ್ವಜನಿಕರ ಸಮ್ಮುಖದಲ್ಲಿ ಚಾಕುವಿನಿಂದ ಇರಿದಿದ್ದಾನೆ. ಈ ವಿಡಿಯೋ ಸಾರ್ವಜನಿಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಗಾಯಾಳು ವೆಂಕಟೇಶ್ ಖಾಸಗಿ ಆಸ್ಪತ್ರೆಗೆ ದಾಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ.

ಓದಿ: ಶಶಿಕಲಾ ನಟರಾಜನ್‌ಗೆ ಕೊರೊನಾ ಸೋಂಕು ದೃಢ

Last Updated : Jan 22, 2021, 10:05 AM IST

ABOUT THE AUTHOR

...view details