ಮೈಸೂರು: ಸಾ.ರಾ. ಕಲ್ಯಾಣ ಮಂಟಪಕ್ಕೆ ಭೂಮಿ ಹೇಗೆ ಬಂತು, ಯಾರು ಕೊಟ್ಟರು ಎಂದು ಸಾ.ರಾ.ಮಹೇಶ್ ಬಹಿರಂಗಪಡಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಅವರು ಸಾ.ರಾ. ಕನ್ವೆನ್ಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದಿದ್ದಾರೆ. ಆದರೆ, ಕನ್ವೆನ್ಷನ್ ಹಾಲ್ ಕೆರೆ ಜಾಗದ ಒತ್ತುವರಿ ಆಗಿದೆ ಎಂಬ ಅನುಮಾನವಿದೆ. ಆದ್ದರಿಂದ ಸಾ.ರಾ.ಮಹೇಶ್ ಅವರು ಕನ್ವೆನ್ಷನ್ ಹಾಲ್ಗೆ ಜಾಗ ಹೇಗೆ ಬಂತು? ಜಾಗದ ಮೂಲವೇನು? ಎಂಬುದನ್ನು ಬಹಿರಂಗಪಡಿಸಬೇಕು. ಆಗ ತನಿಖೆ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.