ಕರ್ನಾಟಕ

karnataka

ETV Bharat / state

ಕೆಆರ್​ಎಸ್​ ನೀರಿನ ಮಟ್ಟ ಕುಸಿತ : ಒಂದು ವಾರ ಮಾತ್ರ ಬೆಳೆಗಳಿಗೆ ನೀರು - ಕೆಆರ್​ಎಸ್​ ಜಲಾಶಯ

ಕೆಆರ್​ಎಸ್​ ಜಲಾಶಯದಲ್ಲಿ ನೀರಿನ ಮಟ್ಟ 84 ಅಡಿಗಳಿಗೆ ಕುಸಿದಿದೆ.

ಕೆಆರ್​ಎಸ್​ ನೀರಿನ ಮಟ್ಟ ಕುಸಿತ
ಕೆಆರ್​ಎಸ್​ ನೀರಿನ ಮಟ್ಟ ಕುಸಿತ

By

Published : May 22, 2023, 5:04 PM IST

ಕೆಆರ್​ಎಸ್​ ನೀರಿನ ಮಟ್ಟ ಕುಸಿತ

ಮೈಸೂರು :ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆಆರ್​ಎಸ್ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಬೆಳೆಗಳಿಗೆ 1 ವಾರ ನೀರು ಹರಿಸಲು ಮಾತ್ರ ಸಾಧ್ಯವಿದ್ದು, ಉಳಿದ ಪ್ರಮಾಣವನ್ನು ಕುಡಿಯುವ ನೀರಿಗಾಗಿ ಬಳಸುವಂತೆ ಕಾವೇರಿ ನೀರಾವರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಜೀವನದಿ ಕಾವೇರಿಯ ನೀರಿನ ಸಂಗ್ರಹ ಮಾಡುವ ಕೆಆರ್​ಎಸ್ ಜಲಾಶಯದಲ್ಲಿ ನೀರಿನ ಮಟ್ಟ 84 ಅಡಿಗಳಿಗೆ ಕುಸಿದಿದ್ದು, ಸದ್ಯ ಒಂದು ವಾರ ಕಾಲ ಮಾತ್ರ ಬೆಳೆಗಳಿಗೆ ನೀರನ್ನು ಒದಗಿಸಲಾಗುವುದು. ಆನಂತರ ಜಲಾಶಯದಿಂದ ಬೆಳೆಗಳಿಗೆ ನೀರನ್ನು ಹರಿಸುವುದನ್ನು ನಿಲ್ಲಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಜಲಾಶಯದ ಒಟ್ಟು ನೀರಿನ ಸಂಗ್ರಹ 49 ಟಿಎಂಸಿ : ಕೆಆರ್​ಎಸ್​ನ ಗರಿಷ್ಠ ನೀರಿನ ಮಟ್ಟ 124.80 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಇದೆ. ಸದ್ಯ ಜಲಾಶಯದಲ್ಲಿ 84.22 ಅಡಿ ನೀರಿದ್ದು, ಜಲಾಶಯಕ್ಕೆ 438 ಕ್ಯೂಸೆಕ್​ ಒಳ ಹರಿವಿದೆ. ನದಿ ಮತ್ತು ನಾಲೆಗಳಿಗೆ 3712 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 103 ಅಡಿ ನೀರಿತ್ತು. ಆದರೆ ಇಂದು 84 ಅಡಿ ಮಾತ್ರ ನೀರಿದೆ. ಮಳೆ ಬರದಿದ್ದರೆ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ಈಗ ಜಲಾಶಯದಲ್ಲಿ 12.77 ಟಿಎಂಸಿ ಮಾತ್ರ ನೀರಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ 49 ಟಿಎಂಸಿಗಳಾಗಿವೆ.

ಕುಡಿಯುವ ನೀರಿಗೂ ಸಮಸ್ಯೆ ಆಗಬಹುದು :ಆದ್ದರಿಂದ ಸದ್ಯ ಕುಡಿಯುವ ನೀರಿಗೆ ಜಲಾಶಯದ ನೀರನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಬೆಳೆಗಳಿಗೆ ನೀರನ್ನು ಹರಿಸುವುದನ್ನ ನಿಲ್ಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಳೆದ ವರ್ಷ ಈ ವೇಳೆಗೆ ಮಳೆ ಆರಂಭವಾಗಿ, ಜಲಾಶಯಕ್ಕೆ ನೀರು ಬರುತ್ತಿತ್ತು. ಆದರೆ ಈಗ ಮಳೆಯಾಗದ ಕಾರಣ ಜಲಾಶಯಕ್ಕೆ ಒಳ ಹರಿವು ಇಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಕುಡಿಯುವ ನೀರಿಗೂ ಸಮಸ್ಯೆ ಆಗಬಹುದು ಎನ್ನುತ್ತಾರೆ ಹೆಸರನ್ನು ಹೇಳಲು ಇಚ್ಛಿಸದ ನೀರಾವರಿ ಅಧಿಕಾರಿಗಳು.

ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್​​ ನೀರು ಬಿಡುಗಡೆ: ಕೆಆರ್​ಎಸ್ ಜಲಾಶಯದಿಂದ 15 ಗೇಟ್​ಗಳ ​ಮೂಲಕ ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್​​ಗೂ ಹೆಚ್ಚಿನ ನೀರನ್ನು (ಜುಲೈ10-2022)ರಂದು ಹೊರ ಬಿಡುಗಡೆ ಮಾಡಲಾಗಿತ್ತು. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದರಿಂದ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್​​ಗೂ ಅಧಿಕ ನೀರು ಹರಿದುಬಂದಿತ್ತು. 124. 80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಲ್ಲಿ 123 ಅಡಿ ನೀರು ಭರ್ತಿಯಾಗುತ್ತಿದ್ದಂತೆ ನೀರು ಹೊರಬಿಡಲಾಗಿತ್ತು. 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾದ ಹಿನ್ನೆಲೆ ಕಾವೇರಿ ನದಿ ಮೈದುಂಬಿ ಹರಿದಿತ್ತು. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು.

ಇದನ್ನೂ ಓದಿ:ಕೆಆರ್​ಎಸ್ ಜಲಾಶಯದಿಂದ ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್​​ ನೀರು ಬಿಡುಗಡೆ

ABOUT THE AUTHOR

...view details