ಮೈಸೂರು :ದೇವಸ್ಥಾನ ಕಟ್ಟುವುದರಲ್ಲಿ ಹಾಗೂ ಕೆಡುವೋದರಲ್ಲಿಯೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು.
ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ವಾಗ್ದಾಳಿ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದಲ್ಲಿ ಮಹಾದೇವಮ್ಮ ದೇವಸ್ಥಾನ ತೆರವು ಮಾಡಿರುವ ಸ್ಥಳಕ್ಕೆ ಭೇಟಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ದೇವಸ್ಥಾನ ತೆರವುಗೊಳಿಸಿರುವುದಕ್ಕೆ ಸರ್ಕಾರ ನೇರ ಹೊಣೆಯಾಗಿದೆ.
ಸಿಎಂ, ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದಾರೆ. ಅವರ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ಡಿಸಿಗಳಿಗೆ ಸೂಚಿಸಿದ್ದಾರೆ. ತಾಲೂಕುಗಳಲ್ಲಿ ವಾರಕ್ಕೊಂದು ದೇವಸ್ಥಾನ ತೆರವು ಮಾಡಲು ಸೂಚನೆ ನೀಡಲಾಗಿತ್ತು ಎಂದರು.
ಯಾವುದೇ ರಾಜಕೀಯ ಪಕ್ಷ ಧರ್ಮವನ್ನು ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡಬಾರದು. ಆದರೆ, ಪ್ರತಿನಿತ್ಯ ಇತರೆ ಧರ್ಮವನ್ನ ನಿಂದನೆ ಮಾಡಿ, ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರು ದ್ವಂದ್ವ ನಿಲುವುಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ದೇವಸ್ಥಾನ ತೆರವು ಮಾಡುವ ಮುನ್ನ ಗ್ರಾಮಸ್ಥರೊಂದಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆ ನಡೆಸಬೇಕಿತ್ತು. ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡಲಾಗಿದೆ ಎಂದು ಆರ್ ಧ್ರುವನಾರಾಯಣ್ ದೂರಿದರು.
ಇದನ್ನೂ ಓದಿ:ದೇವಸ್ಥಾನ ನೆಲಸಮಗೊಳಿಸುವ ವಿಚಾರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು: ಸಿದ್ದರಾಮಯ್ಯ ನೇರ ಆರೋಪ