ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಮೈಸೂರು ಜನತೆ - ನಿರಾಶ್ರಿತ ಕೇಂದ್ರ

ರಾಜ್ಯದಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಪರಿಣಾಮ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನೆರೆ ಸಂತ್ರಸ್ತರಿಗೆ ನೆರವು ನೀಡಲು ಸಾಂಸ್ಕೃತಿಕ ನಗರಿ ಜನತೆ ಮುಂದಾಗಿದ್ದಾರೆ.

ಸಂತ್ರಸ್ತರಿಗೆ ದಾನಿಗಳಿಂದ ನೆರವು

By

Published : Aug 11, 2019, 4:46 PM IST

ಮೈಸೂರು:ಉತ್ತರ ಕರ್ನಾಟಕ, ಮೈಸೂರು ಭಾಗದ ಹಲವು ಪ್ರದೇಶಗಳಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ಜಿಲ್ಲಾಡಳಿತ ಸಂತ್ರಸ್ತರ ಸಹಾಯ ಕೇಂದ್ರ ತೆರೆದಿದೆ.

ಸಾಂಸ್ಕೃತಿಕ ನಗರಿ ಜನತೆಯಿಂದ ಇದಕ್ಕೆ ಉತ್ತಮ ಸ್ಫಂದನೆ ದೊರೆತಿದ್ದು, ಜಿಲ್ಲಾಡಳಿತ ಸಿದ್ಧಪಡಿಸಿದ ಪಟ್ಟಿಯಂತೆಯೇ ಜನರು ವಸ್ತುಗಳನ್ನು ತಂದು ಕೊಡುತ್ತಿದ್ದಾರೆ. ನಗರ ಪಾಲಿಕೆಯಿಂದ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ, ದಾನಿಗಳಿಂದ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಸಂತ್ರಸ್ತರಿಗೆ ದಾನಿಗಳಿಂದ ನೆರವು

ಹೀಗೆ ಸಂಗ್ರಹಗೊಂಡಂತಹ ವಸ್ತುಗಳನ್ನು ಪರಿಹಾರ ಕೇಂದ್ರಗಳಿಗೆ ನೀಡಲಾಗುತ್ತದೆ.ಇನ್ನು ಮೈಸೂರು ಸುತ್ತಮುತ್ತ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿರುವ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಪ್ರವಾಹದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಕೂಡಲೇ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇಂದು ಪ್ರವಾಹದಿಂದ ಹಾನಿಗೊಳಗಾದ ಹುಣಸೂರಿನ ಪಟ್ಟಣದ ಬಡಾವಣೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಅವರು, ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಕೂಡಲೇ ಸರ್ಕಾರ ಅಗತ್ಯ ವಸ್ತುಗಳು, ಆಹಾರ ಹಾಗೂ ಮನೆ ಕಳೆದುಕೊಂಡ ಜನರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ABOUT THE AUTHOR

...view details