ಕರ್ನಾಟಕ

karnataka

ETV Bharat / state

ಕಟೀಲ್ ಜೋಕರ್​ಗಿಂತ ಕಡೆ: ಕಾಂಗ್ರೆಸ್​ ವಕ್ತಾರ ಲಕ್ಷ್ಮಣ್ ವಾಗ್ದಾಳಿ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ವಜ್ರಮುನಿಗೆ ಹೋಲಿಸಿರುವ ನಳಿನ್ ಕುಮಾರ್ ಕಟೀಲ್​ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗರಂ ಆಗಿದ್ದಾರೆ.

kpcc-spokesperson-m-laxman-outrage-against-nalin-kumar-kateel
ಕಟೀಲ್ ಜೋಕರ್​ಗಿಂತ ಕಡೆ: ಕಾಂಗ್ರೆಸ್​ ವಕ್ತಾರ ಲಕ್ಷ್ಮಣ್ ವಾಗ್ದಾಳಿ

By

Published : Nov 1, 2022, 10:59 PM IST

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅಧ್ಯಕ್ಷ ಸ್ಥಾನಕ್ಕೆ ಲಾಯಕ್ ಅಲ್ಲದ ವ್ಯಕ್ತಿ ಮತ್ತು ಜೋಕರ್​ಗಿಂತ ಕಡೆ ಮನುಷ್ಯ. ಇವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸುವ ವ್ಯವಸ್ಥೆ ಸಿದ್ಧವಾಗುತ್ತಿದೆ. ಇದರಿಂದ ಹತಾಶರಾಗಿ ಏನೋನು ಮಾತನಾಡುತ್ತಿದ್ದರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ವಜ್ರಮುನಿಗೆ ಹೋಲಿಸಿರುವ ನಳಿನ್ ಕುಮಾರ್ ಕಟೀಲ್​ ವಿರುದ್ಧ ಗರಂ ಆದರು. ವಜ್ರಮುನಿ ಅತ್ಯುತ್ತಮ ನಟರಾಗಿದ್ದರು. ವಜ್ರಮುನಿ ಅವರನ್ನು ಖಳನಾಯಕ ಎಂದು ಬಿಂಬಿಸಿರುವುದು ಸರಿಯಲ್ಲ. ಅವರು ನಟನೆಯಲ್ಲಿ ಖಳನಾಯಕ, ಜೀವನದಲ್ಲಿ ಒಳ್ಳೆಯ ವ್ಯಕ್ತಿಯಾಗಿದ್ದರು. ಅದನ್ನು ಕಟೀಲ್ ತಿಳಿಯಬೇಕು ಎಂದು ಅಸಮಾಧಾನ ಹೊರಹಾಕಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಳವಾರ, ಪರಿವಾರ ಹಾಗೂ ಸಿದ್ದ ಜನಾಂಗವನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕಾಂಗ್ರೆಸ್ಸಿನವರನ್ನು ಟೀಕಿಸುವ ಮುನ್ನ ಬಿಜೆಪಿಯವರು ವಿಷಯಗಳನ್ನು ತಿಳಿದು ಮಾತನಾಡಬೇಕು ಎಂದು ತಾಕೀತು ಮಾಡಿದರು.

ಪತ್ರಕರ್ತರ ಖರೀದಿಗೂ ಬಿಜೆಪಿ ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಈ ಮೂಲಕ ಮಾಧ್ಯಮಗಳಿಗೆ ಕಳಂಕ ಹಚ್ಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಆದರೆ, ಸರ್ಕಾರ ನೀಡಿದ್ದ ಉಡುಗೊರೆಯನ್ನು ಬಹುತೇಕ ಪತ್ರಕರ್ತರು ತಿರಸ್ಕರಿಸಿ, ಸರ್ಕಾರ ಕ್ಕೆ ಬಿಸಿ ಮುಟ್ಟಿಸಿರುವುದು ಸಂತಸ ವಿಷಯ ಎಂದು ಹೇಳಿದರು.

ಇದನ್ನೂ ಓದಿ:ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿ ಮಾತನಾಡಿದ್ದಾರೆ.. ಗಂಭೀರವಾಗಿ ಪರಿಗಣಿಸಬೇಡಿ: ಶಾಸಕ ಪ್ರೀತಂ ಗೌಡ

ABOUT THE AUTHOR

...view details