ಕರ್ನಾಟಕ

karnataka

ಪ್ರತಾಪ್​​ ಸಿಂಹರ 17 ಎಪಿಸೋಡ್​ನ ಸಿಡಿಗಳು ನನ್ನ ಬಳಿ ಇವೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್

By

Published : Jul 1, 2022, 7:37 PM IST

ಸಂಸದ ಪ್ರತಾಪ್​​ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

KPCC spokesperson Lakxman
ಕೆಪಿಸಿಸಿ ವಕ್ತಾರ ಲಕ್ಷ್ಮಣ್

ಮೈಸೂರು: ಸಂಸದ ಪ್ರತಾಪ್​​ ಸಿಂಹ ಅವರೇ, ನಿಮ್ಮಂತೆ ಅಶ್ಲೀಲ ಸಿಡಿಯನ್ನು ಯಾರೂ ಬಿಡುಗಡೆ ಮಾಡದಂತೆ ಕೋರ್ಟ್‍ನಿಂದ ತಡೆಯಾಜ್ಞೆ ತಂದಿಲ್ಲ. ನಿಮ್ಮ 17 ಎಪಿಸೋಡ್​ನ ಸಿಡಿಗಳು ನನ್ನ ಬಳಿ ಇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಾಪ್​ ಸಿಂಹ ಪ್ರಾಮಾಣಿಕವಾಗಿದ್ದರೆ ತಡೆಯಾಜ್ಞೆ ರದ್ದುಗೊಳಿಸಿ. ಆಮೇಲೆ ನಿಮ್ಮ ಬಂಡವಾಳ ಬಯಲಾಗುತ್ತದೆ. ಹೆಣ್ಣು ಮಕ್ಕಳನ್ನು ಯಾವ ರೀತಿ ಬಳಸಿಕೊಂಡಿದ್ದೀರಿ ಎಂಬುವುದನ್ನು ಜನರಿಗೆ ತೋರಿಸುತ್ತೇವೆ ಎಂದರು.


ನಿಮ್ಮ ರೀತಿ ಒಂದು ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ನಾನು ಈವರೆಗೆ ಹಾಕಿಸಿಕೊಂಡಿಲ್ಲ. ನಿಮ್ಮ ರೀತಿ ಹೆಂಡತಿಯನ್ನು ತಂಗಿ ಎಂದು ಹೇಳಿ ಮುಡಾ ಸೈಟ್ ಪಡೆದಿಲ್ಲ ಎಂದು ವ್ಯಂಗ್ಯವಾಡಿದರು.

ಜೂ.29ರಂದು ಜಲದರ್ಶಿನಿಯಲ್ಲಿರುವ ಸಂಸದರ ಕಚೇರಿಯಲ್ಲಿ ಚರ್ಚೆಗೆ ಕರೆದಾಗ ಮೈಸೂರು ಕೊಡಗು ಭಾಗದ ಫಿಲ್ಮ್ ಹೀರೋ ಮೂರನೇ ಬಾರಿಗೆ ಪಲಾಯನ ಮಾಡಿದ್ದಾರೆ. ಮೈಸೂರು ಅಭಿವೃದ್ಧಿ ಕುರಿತಂತೆ ಆರೋಗ್ಯಕರ ಚರ್ಚೆಗೆ ಕರೆದರೂ ಕುಂಟು ನೆಪ ಹೇಳಿ ಗೈರಾಗುತ್ತಿದ್ದಾರೆ. ನೀವೇ ಪಕ್ಷದ ಮೇಧಾವಿಗಳನ್ನು ಕಳುಹಿಸಿ ಎಂದು ಕುಟುಕಿದರು.

ನನ್ನನ್ನು ಹಂದಿ, ಕತ್ತೆ ಎಂದು ಕರೆದಿರುವುದಕ್ಕೆ ನನಗೆ ಹೆಮ್ಮೆಯಿದೆ. ಹಂದಿ ಕೇವಲ ಪ್ರಾಣಿಯಲ್ಲ, ಕೆಲ ವರ್ಗದ ಆಹಾರ ಪದ್ಧತಿ. ಕೆಲವರು ಹಂದಿಯನ್ನು ಪೂಜೆ ಮಾಡುತ್ತಾರೆ. ಕತ್ತೆಗೆ ಮಡಿವಾಳ ಸಮುದಾಯದಲ್ಲಿ ಪೂಜನೀಯ ಸ್ಥಾನ ಸಿಕ್ಕಿದೆ. ಪ್ರಾಣಿಗಳಿಗೆ ವಿಶೇಷ ಸ್ಥಾನವಿದೆ. ಅವುಗಳನ್ನು ಅವಮಾನ ಮಾಡಿದರೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.

ಇದನ್ನೂ ಓದಿ:'ದೇವೇಗೌಡರ ಬಗ್ಗೆ ಆಡಿದ ಮಾತುಗಳು ವಿಕೃತ ಮನಸ್ಸಿನವು; ಮಧುಗಿರಿಯಲ್ಲಿ ಜನರಿಂದ್ಲೇ ಉತ್ತರ ಕೊಡಿಸುವೆ'

ಜುಲೈ 5ರಂದು ಬೆಳಿಗ್ಗೆ 11ಗಂಟೆಗೆ ಸಂಸದ ಪ್ರತಾಪ್​​ ಸಿಂಹ ಅವರ ಕಚೇರಿಗೆ ತೆರಳುತ್ತೇನೆ. ಅಂದು ಪೊಲೀಸರ ಮೂಲಕ ನನ್ನನ್ನು ತಡೆಯುವ ಪ್ರಯತ್ನ ಮಾಡಬೇಡಿ. ಅಂದು ಪಲಾಯನ ಮಾಡಿದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಸ್ವರೂಪ ಬದಲಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details