ಕರ್ನಾಟಕ

karnataka

ETV Bharat / state

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೊಳ್ಳೆಗಾಲದ ಶಾಸಕ ಎನ್ ಮಹೇಶ್ - ETV Bharat kannada News

ದೀಢಿರ್​ ಎದೆನೋವು ಕಾಣಿಕೊಂಡು ಆಸ್ಪೆತ್ರೆ ಸೇರಿದ ಶಾಸಕ ಎನ್ ಮಹೇಶ್​ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ.

Kolegala MLA N Mahesh
ಕೊಳ್ಳೆಗಾಲದ ಶಾಸಕ ಎನ್ ಮಹೇಶ್

By

Published : Mar 13, 2023, 5:18 PM IST

Updated : Mar 13, 2023, 6:06 PM IST

ಆರೋಗ್ಯ ಚೇತರಿಸಿಕೊಂಡು ಇಂದು ಆಸ್ಪತ್ರೆಯಿಂದ ಶಾಸಕ ಎನ್​.ಮಹೇಶ್​ ಡಿಸ್ಚಾರ್ಜ್​

ಮೈಸೂರು :ಎದೆ ನೋವು ಕಾಣಿಸಿಕೊಂಡ ಹಿನ್ನಲೆ ಶನಿವಾರ ಮೈಸೂರಿನ ಖಾಸಗಿ ಆಸ್ಪತ್ರಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಮೀಸಲು ಕ್ಷೇತ್ರದ ಶಾಸಕ ಎನ್.ಮಹೇಶ್ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡು ನಂತರ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಶನಿವಾರ ಮಾಜಿ ಸಂಸದ ದೃವನಾರಾಯಣ್ ಅವರ ಅಂತಿಮ ದರ್ಶನ ಪಡೆದು ಬಳಿಕ ತಮ್ಮ ಕೊಳ್ಳೆಗಾಲ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎನ್.ಮಹೇಶ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು.

ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಅಲ್ಲಿಂದ ಮೈಸೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅಂಜಿಯೋಗ್ರಾಮ್ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಗಿದ್ದು, ಭಾನುವಾರ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದು. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ತಮ್ಮ ಬೋಗಾದಿಯ ನಿವಾಸಕ್ಕೆ ಹೊರಟರು.

ಇನ್ನೂ ಆಸ್ಪತ್ರೆಯಿಂದ ಡಿಸ್ಟಾರ್ಜ್​ ಆಗಿ ಹೊರ ಬಂದು ಮಾತನಾಡಿದ ಶಾಸಕ ಎನ್​.ಮಹೇಶ್​ ಅವರು, ಈಗ ನಾನು ಚೆನ್ನಾಗಿದ್ದೇನೆ, ವೈದ್ಯರ ಸಲಹೆಯ ಮೇರೆಗೆ ಒಂದು ದಿನ ವಿಶ್ರಾಂತಿಯನ್ನು ಆಸ್ಪತ್ರೆಯಲ್ಲೇ ಪಡೆದಿದ್ದು, ನಾನು ಚೆನ್ನಾಗಿದ್ದೇನೆ. ಜನರನ್ನು ಸಂಜೆ ಭೇಟಿಯಾಗುತ್ತೇನೆ ಎಂದು ತಿಳಿಸಿದರು.

ಈ ಬಗ್ಗೆ ಆಸ್ಪತ್ರೆಯ ಮೂಲಗಳ ಪ್ರಕಾರ, ಶಾಸಕ ಎನ್.ಮಹೇಶ್ ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರಿಗೆ ದೊಡ್ಡ ಸಮಸ್ಯೆ ಇರಲಿಲ್ಲ. ಹೃದಯ ಭಾಗದ ಒಂದು ನಾಳ ಸ್ವಲ್ಪ ಬ್ಲಾಕ್ ಆಗಿತ್ತು. ಅದನ್ನು ಸರಿಪಡಿಸಲಾಗಿದೆ. ಅವರು ಆರೋಗ್ಯವಾಗಿ ಇದ್ದಾರೆ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಂಪೂರ್ಣ ಗುಣಮುಖರಾಗಿದ್ದಾರೆ, ಎಂದು ಅಪೋಲೋ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷರಾದ ಡಾ.ಭರತ್ ರೆಡ್ಡಿ ಮಾಹಿತಿ ನೀಡಿದರು.

ವೈದ್ಯರಿಂದ ಮಾಹಿತಿ :ಶನಿವಾರ ಮಧ್ಯಾಹ್ನ ಎದೆನೋವಿನಿಂದ ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕ ಎನ್.ಮಹೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು, ಶಾಸಕ ಎನ್.ಮಹೇಶ್ ಅವರಿಗೆ ಆಂಜಿಯೊಗ್ರಾಮ್ ಸೇರಿದಂತೆ ವಿವಿಧ ತಪಾಸಣೆಗಳನ್ನು ವೈದ್ಯರು ಮಾಡಿದ್ದರು. ಬಳಿಕ ವೈದ್ಯರು ಆತಂಕಪಡುವ ಅಗತ್ಯವಿಲ್ಲ, ವಿಶ್ರಾಂತಿ ಪಡೆಯಿರಿ ಎಂದು ಎನ್.ಮಹೇಶ್ ಅವರಿಗೆ ಸಲಹೆ ನೀಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಅವರ ಸಾವಿನ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಎನ್.ಮಹೇಶ್ ಅವರು, ದಲಿತ ರಾಜಕಾರಣಿಗಳು ಒತ್ತಡದಲ್ಲಿರುತ್ತೇವೆ, ಒತ್ತಡ ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ ಎಂಬ ಹೇಳಿಕೆ ನೀಡಿದರು. ಈ ಹೇಳಿಕೆಗೆ ಕಾಂಗ್ರೆಸ್ ನ ಮುಖಂಡ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕೂಡ ತಿರುಗೇಟು ನೀಡಿದ್ದರು. ಅಲ್ಲದೇ, ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು.

ಗಾಬರಿಯಾಗ ಬೇಡಿ, ಜನರಿಗೆ ಶಾಸಕ ಮನವಿ :ಸ್ನೇಹಿತರೆ, ನಿಮ್ಮಲ್ಲರ ಹಾರೈಕೆಯಿಂದ ನಾನು ಆರೋಗ್ಯವಾಗಿದ್ದೇನೆ. ವೈದ್ಯರು ಇಂದು ದಿನ ವಿಶ್ರಾಂತಿ ಪಡೆಯಲು ಸೂಚಿದ್ದರು. ಆದರಂತೆ ಆಸ್ಪತ್ರೆಯಲ್ಕಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಯಾರು ಗಾಬರಿಯಾಗಬೇಡಿ, ಹಾಗೂ ಆಸ್ಪೆತ್ರೆ ಕಡೆ ಯಾರು ಬರಬೇಡಿ. ನಾಳೆ ಎಂದಿನಂತೆ ನಿಮ್ಮ ಮುಂದೆ ಬರುತ್ತೇನೆ ಎಂದು ಕೊಳ್ಳೇಗಾಲದ ಶಾಸಕ ಎನ್​,ಮಹೇಶ್​ ಅವರು ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ಪೋಸ್ಟ್​ ಹಾಕಿ ಅಭಿಮಾನಿಗಳಿಗೆ ಈ ಮೂಲಕ ಮನವಿ ಮಾಡಿಕೊಂಡಿದ್ದರು. ಅದರಂತೆ ಇಂದು ಅಸ್ಪತ್ರೆಯಿಂದ ಡಿಸ್ಟಾಜ್​ ಆಗಿದ್ದಾರೆ.

Last Updated : Mar 13, 2023, 6:06 PM IST

ABOUT THE AUTHOR

...view details