ಪ್ರೇಮ ವೈಫಲ್ಯ: ಮೈಸೂರಲ್ಲಿ ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ - Knife stabbing case in mysore

ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ
12:39 November 15
ಯುವತಿಗೆ ಚಾಕು ಇರಿತ
ಮೈಸೂರು: ಪ್ರೇಮ ವೈಫಲ್ಯದಿಂದ ಮನನೊಂದ ಯುವಕನೋರ್ವ ಯುವತಿಗೆ ಚಾಕು ಇರಿದಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೆ.ಆರ್. ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿರುವ ಮನೆ ಮುಂದೆ ನಿಂತಿದ್ದ ಯುವತಿ ಅಶ್ವಿನಿ(19)ಗೆ ಯುವಕ ಗಗನ್ ಅಲಿಯಾಸ್ ಕೆಂಚ ಎಂಬಾತ ಚಾಕು ಇರಿದು ಪರಾರಿಯಾಗಿದ್ದಾನೆ.
ಅಶ್ವಿನಿಯನ್ನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Nov 15, 2020, 1:10 PM IST