ಮೈಸೂರು:ಇಂದು ನಂಜನಗೂಡು ದೇವಸ್ಥಾನದ ಮುಂದೆ ಜುಬಿಲಂಟ್ ಕಾರ್ಖಾನೆಯ ಪರವಾಗಿ ಶಾಸಕ ಹರ್ಷವರ್ಧನ್ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಆಹಾರದ ಕಿಟ್ ನನಗಾಗಿ ಅಲ್ಲ, ಕ್ಷೇತ್ರದ ಬಡ ಜನರಿಗೆ: ಶಾಸಕ ಹರ್ಷವರ್ಧನ್ ಸ್ಪಷ್ಟನೆ - ಮೈಸೂರಿನಲ್ಲಿ ಕಿಟ್ ವಿತರಣೆ
ದೇವರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಆಹಾರ ಸಾಮಗ್ರಿಗಳ ಕಿಟ್ ಪಡೆದುಕೊಂಡಿದ್ದು ನಿಜ. ಆದರೆ ನನಗಾಗಿ ಅಲ್ಲ, ಕ್ಷೇತ್ರದ ಬಡಜನತೆಗಾಗಿ ಎನ್ನುವ ಮೂಲಕ ತಮ್ಮ ಮೇಲೆ ಬಂದಿದ್ದ ಆರೋಪದ ಬಗ್ಗೆ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ಸ್ಪಷ್ಟನೆ ಕೊಟ್ಟಿದ್ದಾರೆ.
ಕಿಟ್ ವಿತರಣೆ ಬಳಿಕ ಮಾತನಾಡಿದ ಶಾಸಕ ಹರ್ಷವರ್ಧನ್, ನನ್ನ ಮೇಲೆ ಜುಬಿಲಂಟ್ ಕಾರ್ಖಾನೆಯಿಂದ ಆಹಾರ ಸಾಮಗ್ರಿಗಳ ಕಿಟ್ ಪಡೆದಿದ್ದೇನೆ ಎಂದು ಆರೋಪ ಮಾಡಿದ್ದಾರೆ. ದೇವರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ, ನಾನು ಕಿಟ್ ಪಡೆದುಕೊಂಡಿದ್ದು ನಿಜ. ಆದರೆ ನನಗಾಗಿ ಅಲ್ಲ, ಕ್ಷೇತ್ರದ ಬಡಜನತೆಗಾಗಿ ಎಂದರು. ಬಡಜನರ ಸಂಕಷ್ಟ ನೋಡಲು ಆಗುತ್ತಿಲ್ಲ, ಆರ್ಥಿಕವಾಗಿ ನನ್ನ ಹತ್ತಿರ ಹಣಕಾಸು ಇಲ್ಲ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್ ಅನ್ನು ತಂದಿದ್ದೇನೆ. ಕಿಟ್ ನನಗಾಗಿ ಅಲ್ಲ, ಕ್ಷೇತ್ರದ ಜನರಿಗಾಗಿ ಎಂದು ತಮ್ಮ ಮೇಲೆ ಬಂದಿದ್ದ ಆರೋಪದ ಬಗ್ಗೆ ಹರ್ಷವರ್ಧನ್ ಕಾರಣಕೊಟ್ಟರು.
ಇಂದು ಜುಬಿಲಂಟ್ ವತಿಯಿಂದ ನಂಜನಗೂಡಿನ ಗ್ರಾಮಗಳಿಗೆ 50,000 ಆಹಾರ ಸಾಮಗ್ರಿಗಳ ಕಿಟ್ಗಳನ್ನು ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಮಾಜಿ ಸಂಸದ ಧ್ರುವ ನಾರಾಯಣ್, ಮಾಜಿ ಶಾಸಕ ಕೇಶವ್ ಮೂರ್ತಿ ಜುಬಿಲಂಟ್ನಿಂದ ಕಿಟ್ ಪ್ಯಾಕ್ ಪಡೆದಿದ್ದಾರೆ ಎಂಬ ಆರೋಪಕ್ಕೆ ಇಲ್ಲಿ ತಿರುಗೇಟು ನೀಡಿದರು.