ಕರ್ನಾಟಕ

karnataka

ETV Bharat / state

ಯೂಟ್ಯೂಬ್ live ನಲ್ಲಿ ಡಿಸಿಪಿ ಪ್ರಕಾಶ್ ಗೌಡರನ್ನು ಅಭಿನಂದಿಸಿದ ಕಿಚ್ಚ ಸುದೀಪ್ - ನಟ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಯೂಟ್ಯೂಬ್ ಚಾನಲ್‌ನಲ್ಲಿ ಲೈವ್‌ಗೆ ಬಂದು ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಡಿಸಿಪಿ ಪ್ರಕಾಶ್ ಗೌಡ ಅವರೊಂದಿಗೆ ಮಾತುಕತೆ ನಡೆಸುತ್ತಾ, ಜೀವನವನ್ನೇ ಪಣಕ್ಕಿಟ್ಟು ಕೊರೊನಾ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ್ದೀರಾ, ನಿಮಗೆ ಧನ್ಯವಾದಗಳು ಎಂದರು.

Kischa Sudeep congratulates DCP Prakash Gowda through YouTube Live
ಯೂಟ್ಯೂಬ್ ಲೈವ್ ನಲ್ಲಿ ಡಿಸಿಪಿ ಪ್ರಕಾಶ್ ಗೌಡರಿಗೆ ಅಭಿನಂದಿಸಿದ ಕಿಚ್ಚ ಸುದೀಪ್

By

Published : Jul 15, 2020, 6:08 PM IST

ಮೈಸೂರು:ನಟ ಕಿಚ್ಚ ಸುದೀಪ್ ಯೂಟ್ಯೂಬ್ ಚಾನಲ್​ ಮೂಲಕ ಲೈವ್‌ಗೆ ಬಂದು ನಗರದ ಡಿಸಿಪಿ ಪ್ರಕಾಶ್ ಗೌಡರಿಗೆ ಅಭಿನಂದನೆ ಸಲ್ಲಿಸಿದರು.

ಯೂಟ್ಯೂಬ್ ಲೈವ್ ನಲ್ಲಿ ಡಿಸಿಪಿ ಪ್ರಕಾಶ್ ಗೌಡರಿಗೆ ಅಭಿನಂದಿಸಿದ ಕಿಚ್ಚ ಸುದೀಪ್

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಪ್ರಕಾಶ್ ಗೌಡ, ನಿಮ್ಮ ಜೊತೆ ಮಾತನಾಡಿದ್ದು ಸಂತೋಷವಾಗಿದೆ. ನಿಮ್ಮ ಮಾತನ್ನು ಲಕ್ಷಾಂತರ ಜನ ಕೇಳುತ್ತಾರೆ. ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಜನರು ಮುಂಜಾಗ್ರತಾ ಕ್ರಮ ವಹಿಸಬೇಕು. ನೀವುಗಳೂ ಕೂಡ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು. ಜೊತೆಗೆ, ಚಲನಚಿತ್ರೋದ್ಯಮದ ಕೆಲವರಿಗೂ ಸೋಂಕು ತಗುಲುತ್ತಿದ್ದು, ಪ್ರತಿಯೊಬ್ಬರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಸುದೀಪ್ ಇದಕ್ಕೆ ಉತ್ತರಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ. ಕುಟುಂಬಸ್ಥರನ್ನೆಲ್ಲಾ ಬಿಟ್ಟು ದೂರ ಉಳಿದು ಶ್ರಮ ವಹಿಸಿ ಕೊರೊನಾ ಸೋಂಕು ನಿಯಂತ್ರಣದ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ, ವೈದ್ಯರಿಗೆ ತುಂಬು ಹೃದಯದ ಧನ್ಯವಾದಗಳು ಎಂದರು.

ABOUT THE AUTHOR

...view details