ಕರ್ನಾಟಕ

karnataka

ETV Bharat / state

ಖಾಸಗಿ ದರ್ಬಾರ್​​ ರಾಜಪರಂಪರೆಯ ಪ್ರತೀಕವಾಗಿದೆ​​: ಯದುವೀರ್ - Khasagi Darbar in Mysore

ನವರಾತ್ರಿಯ ಸಮಯದಲ್ಲಿ 9 ದಿನಗಳ ಕಾಲ ಅರಮನೆಯ ದರ್ಬಾರ್ ಹಾಲ್​ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಪೂಜೆ ಮಾಡಿ, ಖಾಸಗಿ ದರ್ಬಾರ್ ನಡೆಸಿಕೊಂಡು ಹೋಗುವ ಸಂಪ್ರದಾಯವನ್ನು ಮುಂದುವರೆಸಲಾಗುತ್ತಿದೆ.

Khasagi Darbar in Mysore Palace
ಖಾಸಗಿ ದರ್ಬಾರ್

By

Published : Oct 17, 2020, 2:04 PM IST

ಮೈಸೂರು:ಅರಮನೆಯಲ್ಲಿ ಶರನ್ನವರಾತ್ರಿಯ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್. ರತ್ನ ಖಚಿತ ಸಿಂಹಾಸನದಲ್ಲಿ ಹಿಂದಿನ‌ ಕಾಲದ ರಾಜರು ನಡೆಸುತ್ತಿದ್ದ ದರ್ಬಾರ್​ನ ಸಂಪ್ರದಾಯವನ್ನು ಇಂದಿಗೂ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಮೂಲಕ ರಾಜಮನೆತನದ ಪರಂಪರೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.

ಖಾಸಗಿ ದರ್ಬಾರ್

ಹಿಂದಿನ ಕಾಲದಲ್ಲಿ ದರ್ಬಾರ್​ನಲ್ಲಿ ಯಾವ ರೀತಿ ನಡೆಯುತ್ತಿತ್ತೋ ಹಾಗೆಯೇ ನವರಾತ್ರಿ ಸಮಯದಲ್ಲಿ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸುತ್ತಾರೆ. 9 ದಿನಗಳ ಕಾಲ ಅರಮನೆಯ ದರ್ಬಾರ್ ಹಾಲ್​ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಪೂಜೆ ಮಾಡಿ, ಖಾಸಗಿ ದರ್ಬಾರ್ ನಡೆಸಿಕೊಂಡು ಹೋಗುವ ಸಂಪ್ರದಾಯವನ್ನು ಮುಂದುವರೆಸಲಾಗುತ್ತಿದೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಿಂದೆ ರಾಜ ಮನೆತನ ಇತ್ತು. ರಾಜರ ಆಳ್ವಿಕೆ ಇತ್ತು. ಆದರೆ ಈಗ ರಾಜರ ಆಳ್ವಿಕೆ ಇಲ್ಲ. ಆದ ಕಾರಣ ರಾಜಪರಂಪರೆಯ ಪ್ರತೀಕವಾದ ಖಾಸಗಿ ದರ್ಬಾರ್​ಅನ್ನು ನವರಾತ್ರಿಯ ಸಮಯದಲ್ಲಿ 9 ದಿನಗಳ ಕಾಲ ಅರಮನೆಯ ದರ್ಬಾರ್ ಹಾಲ್​ನಲ್ಲಿ ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ ಎಂದರು.

ABOUT THE AUTHOR

...view details