ಕರ್ನಾಟಕ

karnataka

ETV Bharat / state

ರಸ್ತೆ ಗುಂಡಿಗಳ ಮೇಲೆ ಚಿತ್ರ ಬರೆದು ವಾಹನ ಸವಾರರಿಗೆ ಎಚ್ಚರಿಸಿದ ವಿದ್ಯಾರ್ಥಿ - ನಾಡ ಹಬ್ಬ ದಸರಾ

ಗೌರಿ-ಗಣೇಶ ಹಬ್ಬದ ಪ್ರಯುಕ್ತ  ಜನರು ತಮ್ಮ‌ ವಾಹನಗಳಲ್ಲಿ ಗಣೇಶ ಮೂರ್ತಿ ತರುವಾಗ ರಸ್ತೆಯಲ್ಲಿರುವ ಗುಂಡಿಗಳಿಂದ ಎಚ್ಚರಿಕೆ ವಹಿಸಬೇಕೆಂದು ರಸ್ತೆಯ ಗುಂಡಿಗಳ ಹತ್ತಿರ ಕಾವಾ ವಿದ್ಯಾರ್ಥಿ ಶಿವರಂಜನ್ ಚಿತ್ರ ಬರೆದು ಸಾರ್ವಜನಿಕರನ್ನು ಎಚ್ಚರಿಸಿದ್ದಾನೆ.

ಚಿತ್ರ

By

Published : Sep 2, 2019, 11:22 AM IST

ಮೈಸೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ರಸ್ತೆ ಗುಂಡಿಗಳ ಮೇಲೆ ಕಲಾವಿದ ತನ್ನ ಕಲೆಯ ಮ‌ೂಲಕ ಎಚ್ಚರಿಸಿದ್ದಾನೆ.

ರಸ್ತೆ ಗುಂಡಿಗಳಲ್ಲಿ ಚಿತ್ರ ಬಿಡಿಸಿದ ಶಿವರಂಜನ್​

ಇಂದು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಜನರು ತಮ್ಮ‌ ವಾಹನಗಳಲ್ಲಿ ಗಣೇಶ ಮೂರ್ತಿ ತರುವಾಗ ರಸ್ತೆಯಲ್ಲಿರುವ ಗುಂಡಿಗಳಿಂದ ಎಚ್ಚರಿಕೆ ವಹಿಸಬೇಕೆಂದು ರಸ್ತೆ ಗುಂಡಿಗಳ ಹತ್ತಿರ ಕಾವಾ ವಿದ್ಯಾರ್ಥಿ ಶಿವರಂಜನ್ ಚಿತ್ರ ಬರೆದು ಸಾರ್ವಜನಿಕರನ್ನು ಎಚ್ಚರಿಸುವ ಮೂಲಕ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಸಹ ಎಚ್ಚರಿಸುವ ಕಾರ್ಯ ಮಾಡಿದ್ದಾನೆ.

ನಾಡ ಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿದ್ದು, ಮೈಸೂರಿನ ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿವೆ. ಶೀಘ್ರವೇ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ABOUT THE AUTHOR

...view details