ಮೈಸೂರು:ಮೈಸೂರು ವಿಶ್ವವಿದ್ಯಾನಿಲಯನವು ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2020(ಕೆ-ಸೆಟ್-2020)ಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಮೇ 25ರವರೆಗೆ ಅವಕಾಶ ನೀಡಿದೆ.
ಲಾಕ್ಡೌನ್ ಎಫೆಕ್ಟ್, ಮತ್ತೆ ಕೆ- ಸೆಟ್ಗೆ ಅರ್ಜಿ ಸಲ್ಲಿಸಲು ಅವಕಾಶ - ಸೆಟ್ ಪರೀಕ್ಷೆ ಮುಂದೂಡಿಕೆ
ಲಾಕ್ಡೌನ್ ಕಾರಣದಿಂದ ಮೈಸೂರು ವಿವಿ ನಡೆಸುವ ಕೆ - ಸೆಟ್ ಪರೀಕ್ಷೆ ಮುಂದೂಡಲಾಗಿತ್ತು. ಈ ಮತ್ತೊಮ್ಮೆ ದಂಡ ಸಹಿತ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಆಕಾಂಕ್ಷಿಗಳು 250 ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. ಈ ಸಂಬಂಧ ಮುಂದಿನ ಕೆ-ಸೆಟ್ ಪರೀಕ್ಷೆ ನಡೆಯುವ ದಿನಾಂಕ ಪ್ರಕಟಿಸಲಾಗುವುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿರುವವರು (http://kest.uni-mysore.ac.in) ಅರ್ಜಿ ಸಲ್ಲಿಸಬಹುದಾಗಿದೆ.
ಈ ಹಿಂದೆ ಕೆ-ಸೆಟ್ ಪರೀಕ್ಷೆಗೆ ಮಾರ್ಚ್ 11ರ ಒಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿ ಪರೀಕ್ಷೆಯನ್ನು ಏಪ್ರಿಲ್ 12ಕ್ಕೆ ನಿಗದಿಪಡಿಸಲಾಗಿತ್ತು. ಲಾಕ್ಡೌನ್ ಕಾರಣದಿಂದ ಪರೀಕ್ಷೆ ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಸಕ್ತರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣೆಯಲ್ಲಿ ತಿಳಿಸಿದೆ.